ಕಾರವಾರ: ನಗರದ ಕ್ರಿಕೆಟ್ ಪ್ರತಿಭೆ, ರಣಜಿಯ ಮಾಜಿ ಆಟಗಾರ ರಾಹುಲ್ ಬೋರ್ಕರ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಲೆವಲ್-2 ಕೋಚಿಂಗ್‌ಗೆ ಆಯ್ಕೆಯಾಗಿ, ಕೀರ್ತಿ ತಂದಿದ್ದಾರೆ. ಎಂಟು ದಿನಗಳ ಈ ಕೋಚಿಂಗ್ ನಲ್ಲಿ ತೇರ್ಗಡೆಯಾಗಿದ್ದು, ರಾಹುಲ್ ಬೋರ್ಕರ್ ಅವರು ಇದೀಗ ರಣಜಿ ಹಾಗೂ ಐಪಿಎಲ್ ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಬಹುದು.
ಲೆವೆಲ್-3 ತೇರ್ಗಡೆಯಾಗಲು ಇನ್ನೋಂದೆ ಹೆಜ್ಜೆ ಬಾಕಿಯಿದ್ದು, ಲೆವೆಲ್-3 ತೇರ್ಗಡೆಯಾದರೆ ಅಂತರಾಷ್ಟ್ರೀಯ ತಂಡಗಳಿಗೆ ಕೋಚ್ ಆಗಿ ತರಬೇತಿ ನೀಡಬಹುದು. ರಾಹುಲ್ ಬೋರ್ಕರ್ ಅವರು ಈಗಾಗಲೇ ಯುಎಸ್ ಅಂಡರ್-17 ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ದುಬೈನಲ್ಲೂ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಲೆವೆಲ್ -3 ತೇರ್ಗಡೆಯಾಗಿ, ಅಂತರಾಷ್ಟಿçÃಯ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸೋಣ.
ವಿಸ್ಮಯ ನ್ಯೂಸ್, ಕಾರವಾರ
ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571