ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ. ಪ್ರಿಯಾಂಕಾ ಮತ್ತು ನಿರ್ಮಲ ಕುಮಾರ ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಹೈದರಾಬಾದ್ ಮೂಲದ 15 ಮಂದಿ ಪ್ರವಾಸಿಗರ ತಂಡ ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಇಲ್ಲಿನ ಬೀಚ್‌ನಲ್ಲಿ ಮಧ್ಯಾಹ್ನ ವೇಳೆಗೆ ಈಜಲು ತೆರಳಿದ್ದರು.
ಈ ವೇಳೆ ಓರ್ವ ಪ್ರವಾಸಿಗ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಪ್ರವಾಸಿಗರು ಸಹಾಯಕ್ಕಾಗಿ ಕೂಗಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ನಾಗೇಂದ್ರ ಎಸ್ ಕುರ್ಲೆ, ಮಂಜುನಾಥ್ ಹರಿಕಂತ್ರ , ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಬೋಟ್ ಮೂಲಕ ತೆರಳಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ವಿಸ್ಮಯ ನ್ಯೂಸ್, ಗೋಕರ್ಣ