ಉತ್ತರಕನ್ನಡದ ಇಂದಿನ‌ ಕೋವಿಡ್ ವಿವರ: ಅಂಕೋಲಾದಲ್ಲಿ ನಾಳಿನ ಲಸಿಕೆ ಲಭ್ಯತೆಯ ವಿವರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 31 ಕೋವಿಡ್‌ ಕೇಸ್ ಪತ್ತೆಯಾಗಿದೆ. ಇಂದು‌ ಜಿಲ್ಲೆಯಲ್ಲಿ ಇಂದು ಯಾವುದೇ ಸಾವಿನ‌ ಪ್ರಕರಣ‌‌ ದಾಖಲಾಗಿಲ್ಲ. ಇದೇ ವೇಳೆ 35 ಜನರು
ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ.

ಅಂಕೋಲಾದಲ್ಲಿ ಇಂದು 1 ಹೊಸ ಪಾಸಿಟಿವ್ ಕೇಸ್‌: ನಾಳೆಯೂ ಲಸಿಕೆ ಲಭ್ಯತೆ

ಅಂಕೋಲಾ ಸೆ 23: ತಾಲೂಕಿನಲ್ಲಿ ಶನಿವಾರ 2 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಸೋಂಕು ಮುಕ್ತರಾದ 10 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಕ್ಕೆ ಇಳಿಕೆಯಾಗಿದೆ. ಕ್ರಿಮ್ಸ್ ಕಾರವಾರ, ಮಂಗಳೂರು ಹಾಗೂ ಕುಮಟಾದ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 7 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3684 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗಿದೆ.

ಸೆ 26ರ ರವಿವಾರ ತಾಲೂಕ ಆಸ್ಪತ್ರೆಯಲ್ಲಿ
ಲಸಿಕಾಕರಣ ನಡೆಯಲಿದ್ದು ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version