ಸಿಲಿಂಡರ್ ಹೊತ್ತು ಬರುತ್ತಿದ್ದ ಮಿನಿ ಲಾರಿ ಪಲ್ಟಿ: ಲಾರಿಯಡಿ ಸಿಲುಕಿದವರ ರಕ್ಷಣೆ: ಗ್ಯಾಸ್ ಸೋರಿಕೆಯಿಂದ ಕೆಲ ಕಾಲ ಆತಂಕ

ಸಿಲಿಂಡರ್ ಹೊತ್ತು ಬರುತ್ತಿದ್ದ ಲಾರಿ ಪಲ್ಟಿಯಾಗಿದೆ ಎಂದು ತಿಳಿದೊಡನೆ ಸ್ಥಳೀಯರು ಆತಂಕಗೊoಡಿದ್ದರು. ಅಲ್ಲದೆ, ದೊಡ್ಡ ಗ್ಯಾಸ್ ಟ್ಯಾಂಕ್ ನಿಂದ ಅನಿಲ ಕೂಡಾ ಸೋರಿಕೆಯಾಗುತ್ತಿತ್ತು. ಆದರೆ, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಮತ್ತು ವಾಹನ ಸವಾರರ ಆತಂಕ ದೂರ ಮಾಡಿದರು.

ಅಂಕೋಲಾ: ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳನ್ನು ಹೊತ್ತು ಆಮ್ಲಜನಕ ಉತ್ಪಾದನಾ ಘಟಕದಿಂದ ಜಿಲ್ಲಾ ಆಸ್ಪತ್ರೆಗೆ ಸಾಗುತ್ತಿದ್ದ ಮಿನಿ ಲಾರಿ ಪಲ್ಟಿಯಾಗಿ ಆತಂಕ ಸೃಷ್ಟಿಯಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಮಿನಿ ಲಾರಿ ಪಲ್ಟಿಯಾಗಿದೆ ಎನ್ನಲಾಗಿದೆ.

ವಾಹನ ಪಲ್ಟಿಯಾದ ಕಾರಣ ಆಕ್ಸಿಜನ್ ಸಿಲೆಂಡರ್ ಸೋರಿಕೆಯಾಗುತ್ತಿರುವುದು ಕಂಡು ಬಂತು. ವೈದ್ಯಕೀಯ ಸೇವೆಗೆ ಬಳಸುವ ಆಮ್ಲಜನಕ ಎಂದು ತಿಳಿದೊಡನೆ ಯಾವುದೇ ಅಪಾಯವಿಲ್ಲ ಎಂದು ಅಕ್ಕಪಕ್ಕದ ನಿವಾಸಿಗಳು ಮತ್ತು ದಾರಿಹೋಕರು ಸಮಾಧಾನದ ನಿಟ್ಟುಸಿರು ಬಿಟ್ಟರು. ಆದರೆ, ಮಿನಿಲಾರಿ ಪಲ್ಟಿಯಾದ ವಾಹನ ಚಾಲಕ ಮತ್ತು ಸಹಾಯಕರು ಗಾಯಗೊಂಡಿದ್ದಾರೆ.

ಕ್ರೇನ್ ಬಳಸಿ, ಜಂಬೋ ಸಿಲೆಂಡರ್ ಮತ್ತಿತರ ಸಿಲಿಂಡರ್ಗಳನ್ನು ಎತ್ತಿ ಬದಲಿ ವಾಹನದ ಮೂಲಕ ಪುನಃ ಬೆಟ್ಕುಳಿಯ ಉತ್ಪಾದನಾ ಘಟಕಕ್ಕೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಾಹನದಲ್ಲಿ ಸಿಲುಕಿಕೊಂಡಿದ್ದ ಸಿಬ್ಬಂದಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂಕೋಲಾ ಸಮೀಪ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ , ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳನ್ನು ಬೆಟ್ಕುಳಿಯಿಂದ ಹೊತ್ತು ಆಮ್ಲಜನಕ ಉತ್ಪಾದನಾ ಘಟಕದಿಂದ ಜಿಲ್ಲಾ ಆಸ್ಪತ್ರೆಗೆ ಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದೆ.

ಅಗ್ನಿ ಶಾಮಕ ದಳದ ಠಾಣಾಧಿಕಾರಿ ಉಮೇಶ ನಾಯ್ಕ, ಸಿಬ್ಬಂದಿಗಳಾದ ಜೀವನ ಬಬ್ರುಕರ್, ಗಣೇಶ ನಾಯ್ಕ ,ರವಿರಾಜ್ ಜೊತೆ ಮಂಜುನಾಥ ನಾಯಕ ಮೊದಲಾದವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪಿಎಸ್ಐ ಪಿಎಸ್ಐ ಪ್ರೇಮನ ಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಪೊಲೀಸ್ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳೀಯರು ಸಹಕರಿಸಿದರು. ಈ ಸಂಬo ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಸ್ಮಯ ನ್ಯೂಸ್ ವಿಲಾಸ ನಾಯಕ್ ಅಂಕೋಲಾ

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Exit mobile version