ಕಾರವಾರ: ಉತ್ತರಕನ್ನಡದಲ್ಲಿ ಇಂದು 19 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಅಲ್ಲದೆ ಇಂದು ಕೋವಿಡ್ ನಿಂದಾಗಿ ಒಂದು ಸಾವು ಸಂಭವಿಸಿದೆ..
ಶಿರಸಿಯಲ್ಲಿ 1, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 3, ಮುಂಡಗೋಡ 1 ಕಾರವಾರದಲ್ಲಿ 11, ಕುಮಟಾದಲ್ಲಿ 2, ಸೇರಿ 19 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಾರವಾರ 11, ಕುಮಟಾ 4, ಹೊನ್ನಾವರ 8, ಭಟ್ಕಳ ಶಿರಸಿಯಲ್ಲಿ ಒಬ್ಬರು ಕೋವಿಡ್ ಗೆದ್ದು ಮರಳಿದ್ದಾರೆ.
ಅಂಕೋಲಾದಲ್ಲಿ ನಾಳೆ 5000 ಕ್ಕೂ ಹೆಚ್ಚು ಕೊವಿಡ್ ಲಸಿಕೆ ಲಭ್ಯತೆ.
ಅಂಕೋಲಾ ಸೆ 28: ತಾಲೂಕಿನಲ್ಲಿ ಮಂಗಳವಾರ ಯಾವುದೇ ಹೊಸ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ.
ಈ ಮೂಲಕ 13 ಸಕ್ರಿಯ ಪ್ರಕರಣಗಳಿವೆ. ಕ್ರಿಮ್ಸ್ ಕಾರವಾರ, ಮಂಗಳೂರು ಹಾಗೂ ಕುಮಟಾದ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 10 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3689 ಜನರಲ್ಲಿ ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ಪ್ರತೀ ಬುಧವಾರ ವಿಶೇಷ ವ್ಯಾಕ್ಸಿನೇಷನ್ ಕ್ಯಾಂಪ್ ನಡೆಸಲು,ತಾಲೂಕು ಆಡಳಿತದ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಮುಂದಾಗಿದ್ದು ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳು ಸೇರಿ ದಿನವೊಂದರಲ್ಲಿಯೇ 5000 ಕ್ಕೂ ಹೆಚ್ಚು ಲಸಿಕೆ ವಿತರಣೆಗೆ ಕ್ರಮ ಕೈಗೊಂಡಿದೆ
ತಾಲೂಕಾ ಆಸ್ಪತ್ರೆ, ಆರೋಗ್ಯ ಕೇಂದ್ರಗಳಾದ ಬೆಳಸೆ,ಹಟ್ಟಿಕೇರಿ,ರಾಮನಗುಳಿ,ಹಾರವಾಡ, ವಿವಿಧ ಕಾಲೇಜು ಗಳಾದ ಜಿ ಸಿ ಕಾಲೇಜ್,ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪೂಜಗೇರಿ, ಕೆಎಲ್ಇ ಕಾಲೇಜ್, ಬಾಸಗೋಡದ ಆರ್ ಎನ್ ಶೆಟ್ಟಿ ಸಭಾಭವನ,ಗ್ರಾಮಪಂಚಾಯತಗಳಾದ ಅವರ್ಸಾ, ಅಗಸೂರು,ಸುಂಕಸಾಳ,ಅಂಗನವಾಡಿಗಳಾದ ಕಲ್ಲೇಶ್ವರ,ಬಳಲೆ,ಉಪ ಕೇಂದ್ರಗಳಾದ ಬೆಲೆಕೇರಿ, ಅಲಗೇರಿ ,ಮಂಜುಗುಣಿ ಗುಂಡಬಾಳ, ಕೊಡ್ಸಣಿ ಭಾಗದ ಶಾಲೆಗಳಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ ನಡೆಸಲಾಗುತ್ತಿದ್ದು ಎಲ್ಲೆಲ್ಲಿ ಎಷ್ಟೆಷ್ಟು ಲಸಿಕೆಗಳು ಲಭ್ಯ ಇವೆ.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಆಯಾ ವ್ಯಾಪ್ತಿಯ ಆಶಾ ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಸಿಬ್ಬಂದಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರ,ಸ್ಥಳೀಯ ಗ್ರಾಮ ಪಂಚಾಯತ್ ಮತ್ತಿತರ ಕರೊನಾ ವಾರಿಯರ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು,ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ