ವಾಣಿಜ್ಯ ಕಟ್ಟಡದಲ್ಲಿನ ಅಂಗಡಿಗೆ ಲಾರಿ ಡಿಕ್ಕಿ: ಮೂರು ಅಂಗಡಿಗೆ ಹಾನಿ

ಯಲ್ಲಾಪುರ: ಚಾಲಕನ ಅಜಾಗರೂಕತೆಯಿಂದಾಗಿ ಲಾರಿಯೊಂದು ಅಂಗಡಿಗೆ ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದ ಪೊಲೀಸ್ ಠಾಣೆಯ ಎದುರು ನಡೆದಿದೆ. ಅಂಕೋಲಾ ಕಡೆಯಿಂದ ಅತಿವೇಗವಾಗಿ ಬಂದAತಹ ಲಾರಿ, ಚಾಲಕನ ಅಜಾಗರುಕತೆಯಿಂದ ನಿಯಂತ್ರಣ ತಪ್ಪಿ ವಾಣಿಜ್ಯ ಕಟ್ಟಡದಲ್ಲಿನ ಮೂರು ಅಂಗಡಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸುಮಾರು 4 ಲಕ್ಷದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಲಾರಿಯಲ್ಲಿದ್ದ ಚಾಲಕ ಸೇರಿ ಮೂವರಿಗೆ ಸಣ್ಣಪಟ್ಟ ಗಾಯಗಳಾಗಿವೆ. ಈ ಸಂಬoಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version