Follow Us On

WhatsApp Group
Important
Trending

ಮನೆಯ ಕಳ್ಳತನದ ಆರೋಪಿ ಬಂಧಿಸಲು ಯಶಸ್ವಿಯಾದ ಪೊಲೀಸರು: ಆರೋಪಿಯಿಂದ 5 ಲಕ್ಷದ 20 ಸಾವಿರ ಮೌಲ್ಯದ ಚಿನ್ನಾಭರಣ ವಶ

ಭಟ್ಕಳ:  ತಾಲೂಕಿನ ತಗ್ಗರಗೋಡದಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ

ಬಂಧಿತ ಆರೋಪಿ ತಾಲೂಕಿನ ಆಜಾಜ್ ನಗರ 7 ನೇ ಕ್ರಾಸ್ ಶೇಡುಕುಳಿ ಹೊಂಡ ನಿವಾಸಿ  ಖಾಜಾ ಅಬ್ದುಲ್ ಸತ್ತಾರ್ ಎಂದು ತಿಳಿದು ಬಂದಿದೆ. ಈತನ ಬಳಿಯಿಂದ 104 ಗ್ರಾಂ ತೂಕದ 5 ಲಕ್ಷದ 20 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕಳೆದ ಆಗಸ್ಟ 28 ರಂದು ತಾಲೂಕಿನ ಜಾಲಿ ರೋಡ್ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎನ್ನುವವರು ಮನೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಈತ ಮನೆಯ ಬಾಗಿಲನ್ನು ಬಲವಾದ ವಸ್ತುವಿನಿಂದ ಒಡೆದು ಮನೆಯ ಬೆಡ್ ರೂಮಿನ ಅಲೈರಾದ ಬಾಗಿಲನ್ನು ತೆರೆದು ಕಿವಿ ಓಲೆ-03 , ಉಂಗುರ-02, ನೆಕ್ಲೆಸ್-01, ಬ್ರಾಸ ಲೈಟ್  ಬಂಗಾರದ ಬಳೆ -01 ,ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಹೀಗೆ ಒಟ್ಟು ಅಂದಾಜು 104 ಗ್ರಾಮದ ತೂಕದ ಬಂಗಾರದ ಆಭರಣಗಳು ಅಂದಾಜು 5 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ.

ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ ಅಧೀಕ್ಷಕರಾದ ಮಾನ್ಯ ಶ್ರೀ ಶಿವಪ್ರಕಾಶ ದೇವರಾಜ ಹಾಗೂ ಶ್ರೀ ಎಸ್ ಬದ್ರೀನಾಥ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಬೆಟ್ಟಯಪ್ಪ ಕೆ.ಯು. ಪೊಲೀಸ್ ಉಪಾಧೀಕ್ಷಕರು ಉಪ ವಿಭಾಗ ಭಟ್ಕಳ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯು ನಡದಿದೆ.

ಭಟ್ಕಳ ವೃತ್ತ ನಿರೀಕ್ಷಕರಾದ  ದಿವಾಕರ ಪಿ.ಎಮ್. ಭಟ್ಕಳಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಸುಮ ಬಿ, ಮತ್ತು ಹೆಚ್.ಬಿ. ಕುಡಗುಂಟಿ, ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಭರತಕುಮಾರ ವಿ, ಹಾಗೂ ರತ್ನಾ ಕುರಿ, ಭಟ್ಕಳ ಶಹರ ನವೀನ ಬೋರ್ಕರ್, ರಾಮಚಂದ್ರ ವೈದ್ಯ, ಸಿಬ್ಬಂದಿಯವರಾದ ದಿನೇಶ ನಾಯಕ, ಲೊಕೇಶ ಕತ್ತಿ, ಈರಣ್ಣ ಪೂಜಾರಿ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ನಾರಾಯಣ ನಾಯ್ಡ. ಮದರಸಾಬ ಚಿಕ್ಕೇರಿ, ಮಲ್ಲಿಕಾರ್ಜುನ ಉಟಗಿ, ಚಾಲಕರಾದ ದೇವರಾಜ ಮೊಗೇರ, ಸುರೇಶ ಕಾಂಟಾಕ್ಟರ್ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಯವರಾದ ಸುಧೀರ ಮಡಿವಾಳ, ರಮೇಶ ನಾಯ್ಕ, ಉದಯ ಗುನಗಾ . ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಸ್ಮಯ ನ್ಯೂಸ್‌ ಉದಯ್ ಎಸ್ ನಾಯ್ಕ ಭಟ್ಕಳ

Back to top button