ನೂತನವಾಗಿ ಆರಂಭಗೊಂಡ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರ ಭೇಟಿ

ಕರ್ನಾಟಕ ಸರಕಾರದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಿ. ಸಿ. ನಾಗೇಶರವರು ಜಿ. ಎನ್. ಹೆಗಡೆ ಟ್ರಸ್ಟ್ (ರಿ.) ಕುಮಟಾ ಇವರ ಪ್ರಾಯೋಜಕತ್ವದಲ್ಲಿ ಕುಮಟಾ ಗೋರೆಯಲ್ಲಿ ನೂತನವಾಗಿ ಆರಂಭಗೊಂಡ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಕುರಿತಾಗಿ ಸಂವಾದ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸರಕಾರದ ನೂತನ ಶಿಕ್ಷಣ ನೀತಿಗೆ ಸಂಬಂಧಿಸಿದ ಕಾರ್ಯಗಾರಗಳನ್ನು ನಡೆಸಲು ಈ ಸಂಸ್ಥೆಯು ಪ್ರಶಸ್ತವಾಗಿದೆ ಎಂದು ಮಾನ್ಯ ಸಚಿವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಮಟಾ ಹೊನ್ನಾವರ ವಿಧಾನಸಭಾಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿಯವರು ಮಾನ್ಯ ಸಚಿವರೊಂದಿಗೆ ಆಗಮಿಸಿ ಸಂಸ್ಥೆಗೆ ಶುಭಕೋರಿದರು. ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ. ಜಿ. ಹೆಗಡೆಯವರು ಮಾನ್ಯ ಸಚಿವರನ್ನು ಹಾಗೂ ಶಾಸಕರನ್ನು ಆದರಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದರು. ಕುಮಟಾದ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಜಿ. ಡಿ. ಭಟ್ಟ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಎಸ್. ಎಲ್. ಭಟ್ಟ, ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಡಿ. ಎನ್. ಭಟ್ಟ ಹಾಗೂ ಉಪನ್ಯಾಸಕ ವೃಂದದವರು ಸಚಿವರೊಂದಿಗೆ ಸಂವಾದಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version