ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾದಿಂದ ಶಿರಸಿ ಹೆದ್ದಾರಿಯ ಅಗಲಿಕರಣ ಕಾಮಗಾರಿ ಆರಂಭವಾಗಿದ್ದು, ಎರಡು ವರ್ಷದಲ್ಲಿ ಈ ಹೆದ್ದಾರಿ ಕಾಮಗಾರಿಯನ್ನ ಪುರ್ತಿ ಮಾಡಬೇಕಿದೆ. ಆದ್ರೆ ಪರಿಸರವಾದಿಗಳು ಪರಿಸರದ ಹೆಸರಿನಲ್ಲಿ ಅನಾವಶ್ಯಕವಾಗಿ ಕಾಮಗಾರಿಗೆ ತಡೆಯೊಡ್ಡುತ್ತಿದ್ದಾರೆ.
ಈಗಾಗಲೇ ಕಾಮಗಾರಿ ಆರಂಭವಾಗಿರುವುದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಕಷ್ಟಕರವಾಗಿದೆ. ಪರಿಸರವಾದಿಗಳಿಂದಾಗಿ ಆರಂಭವಾಗಿರುವ ಕಾಮಗಾರಿ ಸ್ಥಗಿತವಾಗುವಂತಾಗಿದೆ. ಇದರಿಂದ ಆಕ್ರೋಶಗೊಂಡ ಶಿರಸಿ ಭಾಗದ ಹೋರಾಟಗಾರರು. ಪರಿಸರವಾದಿಗಳ ವಿರುದ್ಧ ಶಿರಸಿ ತಾಲೂಕಿನ ಹೆಗಡೆಕಟ್ಟಾ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ಪರಿಸರ ಹೋರಾಟಗಾರರ ವಿರುದ್ಣದ ಆಕ್ರೋಶ ಹೊರಹಾಕಿದ್ದರು.
ಡೋಂಗಿ ಪರಿಸರವಾದಿಗಳು ಪ್ರತಿಭಾರಿಯು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆದ್ರೂ ಎಲ್ಲದಕ್ಕೂ ಅಡ್ಡಿ ಪಡಿಸುತ್ತಾ ಬಂದಿದ್ದಾರೆ. ಈಗ ಮತ್ತೆ ಕಾಮಗಾರಿಗೆ ಅಡ್ಡಿ ಪಡಿಸಲು ಡೋಂಗಿ ಪರಿಸರವಾದಿಗಳು ಮುಂದಾಗಿದ್ದು, ಸರಕಾರ ಇವರ ಡೋಂಗಿ ಹೋರಾಟಕ್ಕೆ ಅವಕಾಶ ನೀಡದೆ ಹೆದ್ದಾರಿ ಕಾಮಗಾರಿ ಸುಗಮವಾಗಿ ನಡೆಸಲು ಅವಕಾಶ ನೀಡಬೇಕು ಅಂತಾ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸ್ಥಳೀಯರು ಹಾಗೂ ವಿವಿಧ ಸಂಘಟನೆಯವರು ಭಾಗಿಯಾಗಿದ್ದರು.
ವಿಸ್ಮಯ ನ್ಯೂಸ್ ಕಾರವಾರ