Join Our

WhatsApp Group
Info
Trending

ಇಂದು ವೆಂಕ್ಟಾಪುರ ದಲ್ಲಿ ನಿನಾದ ದಸರಾ ಕವಿಗೋಷ್ಠಿ

ಭಟ್ಕಳ: ನಿನಾದ ಸಾಹಿತ್ಯ ಸಂಗೀತ ಸಂಚಯ ವತಿಯಿಂದ ಶನಿವಾರ ಸಂಜೆ ೭ ಗಂಟೆಗೆ ನಿನಾದ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ.


ತಾಲೂಕಿನ ವೆಂಕ್ಟಾಪುರದ ನೀರಕಂಠದಲ್ಲಿರುವ ಮಠದ ಶ್ರೀ ಸಿದ್ದಿವಿನಾಯಕ ದೇವಾಲಯದ ಶರನ್ನವರಾತ್ರಿ ಉತ್ಸವದ ಸಭಾ ವೇದಿಕೆಯಲ್ಲಿ ತಾಲೂಕಿನ ಕವಿಗಳಿಗಾಗಿ ನಿನಾದ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ.

ಸದಾ ಕ್ರಿಯಾತ್ಮಕ ಸಾಹಿತ್ಯ ಸಂಗೀತ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿರುವ ನಿನಾದ ಸಾಹಿತ್ಯ ಸಂಗೀತ ಸಂಚಯ ಈ ಕವಿಗೋಷ್ಠಿ ಹಮ್ಮಿಕೊಂಡಿರುವುದಾಗಿ ಹಾಗೂ ತಾಲೂಕಿನ ಸಹೃದಯಿ ಕವಿಗಳು ಭಾಗವಹಿಸಬಹುದಾಗಿದೆ ಎಂದು ನಿನಾದ ಸಂಚಾಲಕರಾದ ಉಮೇಶ ಮುಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತಾಲೂಕಿನ ನಿಕಟಪೂರ್ವ ಕಸಾಪ ಅಧ್ಯಕ್ಷರಾದ ಹಿರಿಯ ನ್ಯಾಯವಾದಿಗಳು ಕವಿಗಳಾದ ಶಂಕರ್ ಕೆ ನಾಯ್ಕ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು. ಅನೇಕ ಹಿರಿ ಕಿರಿಯ ಕವಿಗಳು ಭಾಗವಹಿಸಲಿದ್ದಾರೆ.

Check Also
Close
Back to top button