ರಾತ್ರಿ ವೇಳೆ ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಚಿರತೆ: ಚಿರತೆಯನ್ನು ಕಂಡ ಮನೆಯವರು ಮಾಡಿದ್ದೇನು ನೋಡಿ?
ಕುಮಟಾ: ಚಿರತೆಯೊಂದು ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಪ್ರಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಹೌದು, ಆಹಾರ ಅರಸಿ ಬಂದ ಚಿರತೆಯೊಂದು ಮನೆಗೆ ರಾತ್ರಿ ವೇಳೆ ಮನೆಗೆ ನುಗ್ಗಿದೆ. ಈ ವೇಲೆ ಮನೆಯಲ್ಲಿದ್ದ ಚಿಕ್ಕ ಮಗುವಿನ ಮೇಳೆ ದಾಳಿ ನಡೆಸಿ, ಹೊತ್ತೊಯ್ಯಲು ಪ್ರಯತ್ನಿಸಿದೆ.
ಕೂಡಲೇ ಮನೆಯಲ್ಲಿದ್ದ ಜನರೆಲ್ಲರೂ ಸೇರಿ ಕೂಗಾಡಿ ಚಿರತೆಯನ್ನು ಬೆದರಿಸಿ ಮಗುವನ್ನು ರಕ್ಷಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬರ್ಗಿಯ ನಾರಾಯಣ ನಾಯ್ಕ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಈ ಭಾಗದಲ್ಲಿ ಚಿರತೆ ದಾಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಕಿಮಾನಿಯಲ್ಲಿ ಚಿರತೆಯೊಂದು ಆಹಾರ ಅರಸಿ ನಾಡಿಗೆ ಬಂದಿತ್ತು. ಈ ವೇಳೆ ಆಹಾರ ಅರಸಿ ಬಂದಿದ್ದ ಚಿರತೆಯೊಂದು ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿದೆ. ಆದರೆ, ಈ ವೇಳೆ ತಾನೆ ಬೋನಿನಲ್ಲೇ ಬಂಧಿಯಾದ ಘಟನೆ ನಡೆದಿತ್ತು.
ತಡರಾತ್ರಿ ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆ ಬೋನಿನೊಳಗೆ ಹೋಗಿರುವುದನ್ನು ನೋಡಿ, ಮನೆಯ ಮಾಲೀಕ ಧೈರ್ಯ ಮಾಡಿ, ಬೋನನ್ನು ಲಾಕ್ ಮಾಡಿದ್ದರು. ಹೀಗಾಗಿ ಚಿರತೆ ಬೋನಿನಲ್ಲಿ ಲಾಕ್ ಆಗಿತ್ತು.
ಮನೆಯ ಮಾಲೀಕ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದರು. ಇದೀಗ ಮತ್ತೆ ಇಂತಹದೇ ಘಟನೆ ಮರುಕಳಿಸಿದ್ದು, ಸ್ಥಳೀಯರಲ್ಲಿ ಚಿರತೆಯ ಭಯ ಕಾಡುತ್ತಿದೆ.
ವಿಸ್ಮಯ ನ್ಯೂಸ್ ಕುಮಟಾ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581