ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ


ಶಿರಸಿ: ಪಕ್ಷದ ವರಿಷ್ಠರು ಮತ್ತು ಸಂಘಟನೆ ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪನವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ರವರು ಸ್ಪಷ್ಟಪಡಿಸಿದರು. ನಗರದ ಗೋಪಾಲಕೃಷ್ಣ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿಪೂಜೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಮ್ಮೆಲ್ಲರನ್ನು ಬಿಜೆಪಿ ಬೆಳೆಸಿದೆ. ಪಕ್ಷ ನಮಗೆ ತಾಯಿಯಂತೆ, ವರಿಷ್ಠರು ಬಯಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದರು. ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೆ ಇಲ್ಲ. ಸಂಘಟನೆ ಅವರನ್ನು ಬೆಳಸಿದೆ, ಸಂಘಟನೆ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪಕ್ಷ ಕಟ್ಟಲು ರಾಜ್ಯಾದ್ಯಾಂತ ಪ್ರವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ರಾಜಕೀಯ ಷಡ್ಯಂತ್ರವಲ್ಲ. ಅದೆಲ್ಲ ತನಿಖಾದಳಗಳ ಸಹಜ ಪ್ರಕ್ರಿಯೆ ಎಂದು ವಿಪಕ್ಷದ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version