Join Our

WhatsApp Group
Info
Trending

ಬಿಜಿಎಸ್ ಶಾಖಾ ಮಠ ಮಿರ್ಜಾನಿನ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ:ದೇವಿಗೆ ವೀಳ್ಯದೆಲೆ ಅಲಂಕಾರ

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನ್, ಕುಮಟಾದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ ಹಾಗೂ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಹಾಗೂ ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲಾ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಪೂರ್ಣ ಮಾರ್ಗದರ್ಶನದಲ್ಲಿ ಶರನ್ನವರಾತ್ರಿಯ ಐದನೇ ದಿನವಾದ ಇಂದು ವಿಶೇಷವಾಗಿ ದೇವಿಗೆ ವೀಳ್ಯದೆಲೆ ಅಲಂಕಾರ ಮಾಡಲಾಗಿತ್ತು.

ಈ ವೇಳೆ ಬೆಳಿಗ್ಗೆ ಇಂದ ಲಲಿತಾ ಸಹಸ್ರನಾಮ, ಪಂಚಾಮೃತ ಅಭಿಷೇಕ, ಭಜನಾ ಕಾರ್ಯಕ್ರಮ, ಹವನ, ಸಂಜೆ ಮಹಾಮಂಗಳಾರತಿ ಯೊಂದಿಗೆ ನವರಾತ್ರೋತ್ಸವದ ಐದನೇ ದಿನವು ಸಂಪನ್ನವಾಯಿತು. ಸೇವಾಕರ್ತರು: ಹಾಲಕ್ಕಿ ಒಕ್ಕಲಿಗರ ಸಮುದಾಯ ಅಂಕೋಲಾ ಮತ್ತು ಕಾರವಾರ

ವಿಸ್ಮಯ ನ್ಯೂಸ್ ಕುಮಟಾ

Check Also
Close
Back to top button