ಶಿರಸಿ: ಸಾಗರ್ ಮಾಲಾ ಯೊಜನೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಶ್ನಿಸಿ ಟ್ರಸ್ಟ್ ವೊಂದು ಪಿಐಎಲ್ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ಅನ್ನು ಮಂಗಳವಾರ ವಜಾಗೊಳಿಸಿದೆ.
ರಸ್ತೆ ಹಾದುಹೋಗುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪರಿಸರ ಹಾನಿಯಾಗಲಿದೆ. ಹೀಗಾಗಿ ರಸ್ತೆ ಅಗಲೀಕರಣ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಇದರಿಂದಾಗಿ ಕುಮಟಾ ಶಿರಸಿ ಅಗಲೀಕರಣ ಯೋಜನೆಗೆ ವೇಗ ಪಡೆದುಕೊಳ್ಳಲಿದೆ.
ಯೋಜನೆಯ ಉದ್ದವು 100 ಕಿಮೀಗಿಂತ ಕಡಿಮೆ ಇದೆ ಮತ್ತು ಹೆಚ್ಚುವರಿ ಮಾರ್ಗದ ಹಾದಿ ಸಹ 40 ಮೀಟರ್‌ಗಿಂತ ಕಡಿಮೆ ಇದೆ. ಈ ಅಗಲೀಕರಣವೂ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆ ಎಂದು ಹೈಕೋರ್ಟ್ ಹೇಳಿದ್ದು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ವಿಸ್ಮಯ ನ್ಯೂಸ್, ಶಿರಸಿ