ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳ್ಳಂಬೆಳಿಗ್ಗೆ ಟ್ಯಾಂಕರ್ ವೊಂದು ಸ್ಫೋಟಗೊಂಡಿದ್ದು, ಜನರು ಆತಂಕಗೊoಡಿದ್ದಾರೆ. ಏನೋ ಸ್ಫೋಟವಾಯಿತು. ಕೂಡಲೇ ಬೆಂಕಿ ಆವರಿಸಿಕೊಂಡಿದ್ದು, ಆತಂಕದ ಸ್ಥಿತಿ ನಿರ್ಮಾಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ವಿಸ್ಮಯ ಟಿ,ವಿಗೆ ಮಾಹಿತಿ ನೀಡಿದ್ದಾರೆ.
ಹೌದು, ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಆರ್ತಿಬೈಲ್ ಬಳಿ ಕೆಮಿಕಲ್ ತುಂಬಿದ ಲಾರಿಯೊಂದು ಸ್ಫೋಟಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಹಾಸ ಪಡುತ್ತಿದ್ದಾರೆ. ಸುತ್ತಮುತ್ತಲಿನ ಬೆಟ್ಟಕ್ಕೂ ಬೆಂಕಿ ಆವರಿಸಿದ್ದು, ಕೆಮಿಕಲ್ ನಿಂದಾಗಿಯೇ ಈ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಮಂಗಳೂರಿನಿoದ ಗುಜರಾತಿನ ಅಹಮದಾಬಾದ್ ಗೆ ತೆರಳುತ್ತಿತ್ತು. ಮಂಗಳೂರು ಓನ್ ಜಿಸಿಯಿಂದ ರಾಸಾಯನಿಕ ಸಾಗಿಸಲಾಗುತ್ತಿತ್ತು. ಪಲ್ಟಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಭಾರೀ ಪ್ರಮಾಣದಲ್ಲಿ ಹೊತ್ತಿಕೊಂಡ ಬೆಂಕಿಯಿoದಾಗಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿವೆ.
ಸೋರಿಕೆಯಾದ ರಾಸಾಯನಿಕ ಅಕ್ಕಪಕ್ಕದ ಹಳ್ಳಕ್ಕೆ ಹರಿದಿರುವ ಸಾಧ್ಯತೆಯಿದ್ದು, ಅಪಾರ ಎದುರಾಗುವ ಆತಂಕ ಕಾಡುತ್ತಿದೆ. ಸ್ಥಳದಲ್ಲಿದ್ದ ಅಧಿಕಾರಿಗಳು ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಶೀಲಿಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಬೆಳಿಗ್ಗೆ 5.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ