ಈಜಾಡಲು ತೆರಳಿದ್ದ ಅಲೆಯ ರಭಸಕ್ಕೆ ಕೊಚ್ಚಿಹೋಗುತ್ತಿದ್ದರು ನಾಲ್ವರು : ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಪ್ರವಾಸಿಗರು

ಗೋಕರ್ಣ: ಸಮುದ್ರದಲ್ಲಿ ಈಜಾಡಲು ತೆರಳಿದ್ದ ನಾಲ್ವರು ಅಲೆಯ ರಭಸಕ್ಕೆ ಕೊಚ್ಚಿಹೋಗುತ್ತಿದ್ದರು. ಈ ವೇಳೇ ಕೊಚ್ಚಿಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪ್ರಸಿದ್ಧ ಕುಡ್ಲೆ ಬೀಚ್ ಕಡಲತೀರದಲ್ಲಿ ನಡೆದಿದೆ.

ಬೆಂಗಳೂರಿನ ಕಾಲೇಜೊಂದರ ನಾಲ್ವರು ವಿದ್ಯಾರ್ಥಿಗಳು, ಗೋಕರ್ಣದ ಕುಡ್ಲೆಬೀಚ್ ಪ್ರವಾಸಕ್ಕೆಂದು ಆಗಮಿಸಿದ್ದರು. ಬಳಿಕ ಇವರೆಲ್ಲರೂ ಸಮುದ್ರದಲ್ಲಿ ಈಜಲು ತೆರಳಿದ್ದು, ನಾಲ್ವರು ಯುವಕರು ನೀರಿನ ರಭಸದ ಸುಳಿಗೆ ಸಿಕ್ಕು ಕೊಚ್ಚಿ ಹೋಗುತ್ತಿರುವಾಗ ಲೈಫ್ ಗಾರ್ಡ್ ಸಿಬ್ಬಂದಿ ಗಮನಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ರಾಜು ಅಂಬಿಗ,ನಾಗೇoದ್ರ ಕುರ್ಲೆ,ಪ್ರವಾಸಿ ಮಿತ್ರ ಶೇಖರ ಬಿ.ಹರಿಕಂತ್ರ,ಕರಾವಳಿ ಕಾವಲು ಪಡೆ ಸಿಬ್ಬಂದಿ ನಾಗೇಂದ್ರ ಜಿ.ಠಾಕರ್ ಅವರು ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಕೋಚ್ಚಿಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಿದ್ದಾರೆ.


ಬೀದರ ಜಿಲ್ಲೆಯ ಕಮಲಾನಗರದ ಉಮಾಕಾಂತ ವಾಸುಮತಿ , ಆಂದ್ರ ಪ್ರದೇಶದ ಕಾನ್ಪುರ್ ಮೂಲದ ತೇಜಸ್ವಿ ಬಿರ್ಜೆ ಮೋಹನಸಿಂಗ್, ಬೆಳಗಾವಿಯ ನಿಶಾದ್ ರಾಘವೇಂದ್ರ ಕುಲಕರ್ಣಿ, ಬಿಹಾರದ ನಿಶಾನ್ ಸೀನಾ ಪಟ್ಕಾ ರಕ್ಷಣೆಗೊಳಗಾದ ಪ್ರವಾಸಿಗರು.

ಇತ್ತಿಚಿನ ದಿನಗಳಲ್ಲಿ ಉತ್ತರಕನ್ನಡದ ಸಮುದ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಅಪಾಯವನ್ನೂ ಮೈ ಮೆಲೆ ಎಳೆದುಕೊಳ್ಳುತ್ತಿರುವ ಪ್ರವಾಸಿಗರು, ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಜೀವಕ್ಕೆ ಅಪಾಯ ತಂದಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.


ವಿಸ್ಮಯ ನ್ಯೂಸ್, ಗೋಕರ್ಣ

Exit mobile version