ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನ್ ದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಸಂಪನ್ನ

ಕುಮಟಾ; ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನ್, ಕುಮಟಾದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ ಹಾಗೂ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಹಾಗೂ ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲಾ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಪೂರ್ಣ ಮಾರ್ಗದರ್ಶನದಲ್ಲಿ ವಿಜಯದಶಮಿಯ ವಿಶೇಷವಾಗಿ ದೇವಿಗೆ ಹೂವಿನ ಅಲಂಕಾರ ಮಾಡಿ ಬೆಳಿಗ್ಗೆ ಇಂದ ಲಲಿತಾ ಸಹಸ್ರನಾಮ, ಪಂಚಾಮೃತ ಅಭಿಷೇಕ, ಭಜನೆ ಕಾರ್ಯಕ್ರಮ, ಹವನ, ಸಂಜೆ ಮಹಾಮಂಗಳಾರತಿ ಯೊಂದಿಗೆ ನವರಾತ್ರೋತ್ಸವದ ಒಂಬತ್ತನೇ ದಿನದೊಂದಿಗೆ ಶರನ್ನವರಾತ್ರಿ ಉತ್ಸವವು ಸಂಪನ್ನವಾಯಿತು.

ಸೇವಾಕರ್ತರು: ಶ್ರೀಮತಿ ಶೋಭಾ ಮತ್ತು ಶ್ರೀ ಅಶೋಕ ಶೆಟ್ಟಿ ಕುಮಟಾ, ಕುಟುಂಬದವರು.

ವಿಸ್ಮಯ ನ್ಯೂಸ್ ಕುಮಟಾ

Exit mobile version