ಆತ ನನ್ನ ಹಣದ ಚೀಲ ಎತ್ತಿಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡ ವೃದ್ಧ : ಹಾಡುಹಗಲೇ ವೃದ್ಧನ ಹಣ ದೋಚಿದ ದುಷ್ಕರ್ಮಿಗಳು

ಹಾಡುಹಗಲೇ ನಗರದ ಮಧ್ಯೆ ನಿವೃತ್ತ ಶಿಕ್ಷಕನ ಹಣ ಎಗರಿಸಿದ ದುಷ್ಕರ್ಮಿಗಳು

ಜನರ ಗಮನ ಬೇರೆಡೆ ಸೆಳೆದು ಬ್ಯಾಂಕ್, ಎಟಿಎಮ್, ಜನನಿಬಿಡ ಪ್ರದೇಶದಲ್ಲಿ ಹಣ ಲಪಟಾಯಿಸುವ ಕೃತ್ಯಗಳು ನಡೆಯುತ್ತಲೇ ಇದೆ. ಇಂಥ ಗ್ಯಾಂಗ್ ಗಳಿಗೆ ವೃದ್ಧರು, ಅನಕ್ಷರಸ್ಥರು, ಮಹಿಳೆಯರೇ ಟಾರ್ಗೆಟ್. ದುಷ್ಕರ್ಮಿಗಳು ಇವರನ್ನೇ ಗುರಿಯಾಗಿಸಿಕೊಂಡು ಹೊಂಚು ಹಾಕಿ ಹಣ ಲಪಟಾಯಿಸುತ್ತಿದ್ದಾರೆ.

ಕಾರವಾರ: ವೃದ್ಧನೊಬ್ಬನ ಗಮನ ಬೇರೆಡೆ ಸೆಳೆದು ಬ್ಯಾಂಕಿನಿoದ ವಿತ್ ಡ್ರಾ ಮಾಡಿಕೊಂಡು ಬಂದಿದ್ದ ಹಣವನ್ನು ಲಪಟಾಯಿಸಿದ ಘಟನೆ ನಗರದ ಜನತಾ ಬಝಾರ್ ಬಳಿ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃದ್ಧ ಉಮೇಶ ಸಾವಂತ ಹಣ ಕಳೆದುಕೊಂಡ ವ್ಯಕ್ತಿ.

ಜನನಿಬಿಡ ಪ್ರದೇಶದಲ್ಲಿ ನೂರಾರು ಜನರ ಮಧ್ಯೆಯೇ ಕಳ್ಳರು ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗುತ್ತಿದ್ದಂತೆ, ವೃದ್ಧ ವ್ಯಕ್ತಿ ಕೂಗಿ ಕೊಂಡಿದ್ದಾರೆ. ಆತ ನನ್ನ ಹಣದ ಚೀಲವನ್ನು ಎತ್ತಿಕೊಂಡು ಹೋಗುತ್ತಿದ್ದಾನೆ ಎಂದು ಕೂಗಿದ್ದಾರೆ. ಆದರೆ, ಸಹಾಯಕ್ಕೆ ಯಾರು ಬರಲಿಲ್ಲ ಎನ್ನಲಾಗಿದೆ.

ಉಮೇಶ್ ಸಾವಂತ್ ಅವರು ಬ್ಯಾಂಕಿನಿoದ ಹಣವನ್ನು ತೆಗೆದುಕೊಂಡು ನಗರದ ಜನತಾ ಬಝಾರ್ ಬಳಿ ಬಂದಿದ್ದರು. ಅವರನ್ನು ಹಿಂಬಾಲಿಸಿಕೊoಡು ಬಂದ ತಂಡವೊoದು ಹಣ ಲೂಟಿ ಮಾಡುವ ಉದ್ದೇಶದಿಂದ ಅವರ ಗಮನ ಬೇರೆಡೆಗೆ ಸೆಳೆದಿದೆ. ಅವರನ್ನೇ ಹಿಂಬಾಲಿಸಿಕೊoಡು ಬಂದು ಬೆನ್ನಿಗೆ ಯಾವುದೋ ಅಂಟನ್ನು ಲೇಪಿಸಿದ್ದಾರೆ.

ನಿಮ್ಮ ಬೆನ್ನಿಗೆ ಯಾವುದೋ ಅಂಟು ಅಂಟಿದೆ ಎಂದು ತಿಳಿಸಿ, ವೃದ್ಧ ವ್ಯಕ್ತಿಗೆ ಅದನ್ನು ತೊಳೆಸುವ ನೆಪದಲ್ಲಿ , ಸಹಾಯ ಮಾಡುವಂತೆ ನಟಿಸಿ, ಜನತಾ ಬಝಾರಿನ ಒಳಗಡೆ ಟೇಬಲ್ ಮೇಲೆ ಇಟ್ಟ 65 ಸಾವಿರ ರೂಪಾಯಿ ಬ್ಯಾಂಕ್ ಪಾಸ್ ಬುಕ್ ಮತ್ತು ಇತರೆ ಕಾಗದ ಪತ್ರ ಇದ್ದ ಹ್ಯಾಂಡ್ ಬ್ಯಾಗ್ ಲಪಟಾಯಿಸಿದ್ದಾರೆ.

ವಿವಿಧ ಕಡೆಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ನಗರದ ವಿವಿಧ ಕಡೆಗಳಲ್ಲಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯವಾವಳಿಯಲ್ಲಿ ಓರ್ವನ ಫೋಟೋ ದೊರೆತಿದ್ದು, ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Exit mobile version