ಮನೆಯ ಅಟ್ಟದ ಮೇಲೆ ಸೇರಿಕೊಂಡಿತ್ತು ಬೃಹತ್ ಕಾಳಿಂಗ ಸರ್ಪ! ಮನೆಯವರು ಕಂಗಾಲು

ಕುಮಟಾ: ಮನೆಯ ಅಟ್ಟದ ಮೇಲೆ ಬೃಹತ್ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಮನೆಯವರು ಈ ಬೃಹತ್ ಕಾಳಿಂಗವನ್ನು ನೋಡಿ ಆತಂಕಗೊoಡಿದ್ದರು. ಹೌದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಪವನ್ ನಾಯ್ಕ ಯಾಣದಲ್ಲಿ ಮನೆಯ ಅಟ್ಟದ ಮೇಲೆ ಸೇರಿರುವ ಕಾಳಿಂಗ ಸರ್ಪವನ್ನು ರಕ್ಷಿಸಿದರು.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊoಡಿದ್ದಾರೆ. ಬೆಳಿಗ್ಗೆ ಯಾಣ ಸೆಕ್ಷನ್ ಡೆಪ್ಯೂಟಿ ಆರ್.ಎಪ್.ಓ ವಸಂತ್ ಅವರು ಹಾಗೂ ಫಾರೆಸ್ಟ್ ಗಾರ್ಡ್ ಸದಾಶಿವರವರ ಕರೆಯ ಮೇರೆಗೆ ಯಾಣಕ್ಕೆ ಹೋದೆ. ಅಲ್ಲಿ ಬೆಟ್ಟದಮೇಲೆ ಇರುವ ಮನೆಯ ಅಟ್ಟದ ಮೇಲೆ ಸೇರಿರುವ ಕಾಳಿಂಗ ಸರ್ಪವನ್ನು ರಕ್ಷಿಸಲಾಗಿದ್ದು, ಕಾಳಿಂಗ ಹಾಗೂ ಇತರ ಹಾವಿನ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿರುವುದಾಗಿ ಹೇಳಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Exit mobile version