ಈ ಸರ್ಕಾರಿ ಶಾಲೆಯಲ್ಲಿ ಸುಮಾರು 23 ವಿದ್ಯಾರ್ಥಿಗಳು ಓದುತ್ತಿದ್ದು, ಇಲ್ಲಿನ ದುಸ್ಥಿತಿ ಮಾತ್ರ ಹೇಳತೀರದು. ಶಾಲಾ ಕೊಠಡಿಯ ಮೇಲ್ಛಾವಣೆಯ ಹಂಚುಗಳು ನೆಲಕ್ಕೆ ಬೀಳುತ್ತಿದೆ. ಕೊಠಡಿಯ ಒಳಗೆ ಪ್ರವೇಶ ಮಾಡುವಾಗ ಭಯವಾಗುತ್ತಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಭಯಪಡುತ್ತಿದ್ದಾರೆ.
ಹೊನ್ನಾವರ: ಈ ಸರ್ಕಾರಿ ಶಾಲೆಯ ದುಸ್ಥಿತಿ ನೋಡಿ… ಮೇಲ್ಚಾವಣೆಗೆ ಸಂಪೂರ್ಣ ಹಾನಿಯಾಗಿದ್ದು, ಕುಸಿದು ಬೀಳುವ ಹಂತದಲ್ಲಿದೆ.. ಈ ಕೊಠಡಿಯ ಮೇಲ್ವಾವಣೆಯ ಹಂಚುಗಳು ನೆಲಕ್ಕೆ ಬೀಳುತ್ತಿದ್ದು, ಪಾಠ ಮಾಡುವುದು ಹೋಗಲಿ ಕೊಠಡಿಯ ಒಳಪ್ರವೇಶ ಮಾಡುವಾಗಲೇ ಭಯವಾಗುತ್ತಿದೆ. ಮಳೆ ಬಂದಾಗ ನೇರವಾಗಿ ಮಳೆ ನೀರು ಒಳ ನುಗ್ಗುತ್ತಿದ್ದು, ಕಟ್ಟಡ ಕುಸಿಯುವ ಭೀತಿ ನಿರ್ಮಾಣವಾಗಿದೆ..
ಈ ಶಾಲೆಯಲ್ಲಿ 1 ರಿಂದ 5 ತರಗತಿವರೆಗೆ 23 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇರ್ವರು ಶಿಕ್ಷಕರಿರುವ ಶಾಲೆಗೆ ಎರಡು ಕೋಠಡಿಗಳಿದ್ದು, ಒಂದು ನಲಿಕಲಿ ಕೊಠಡಿ ಹಾಗು ಇನ್ನೊಂದು ಕಲಿನಲಿ ಕೋಠಡಿಗಳಾಗಿವೆ. 1 ರಿಂದ 3 ತರಗತಿಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ನಲಿಕಲಿ ಕೋಠಡಿಯು ಸ್ಥಿತಿ ಹೇಳತೀರದಾಗಿದೆ..
ಹೌದು, ಭಟ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹೆರೆಂಗಡಿ ಗ್ರಾಮ ಪಂಚಾಯತ ವ್ಯಾಪತಿಯ ಎರ್ಜನಮುಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣೆ ಸಂಪೂರ್ಣ ಹಾನಿಯಾಗಿರುದರಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪಾಲಕರು ಭಯ ಪಡುವ ಸ್ಥಿತಿ ಎದುರಾಗಿದೆ. ಹೊನ್ನಾವರ ಪಟ್ಟಣದಿಂದ ಗೇರುಸೋಪ್ಪಾ ಮಾರ್ಗವಾಗಿ ಸಾಗುವಾಗ ಸರಿಸುಮಾರು 25 ಕೀ.ಮೀ ದೂರದಲ್ಲಿರುವ ಈ ಶಾಲೆಯಲ್ಲಿ 1 ರಿಂದ 5 ತರಗತಿವರೆಗೆ 23 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪಂಚಾಯತಿಯಿ0ದ ಹಿಡಿದು ಶಾಸಕರಿಗೆ , ಶಿಕ್ಷಣ ಇಲಾಖೆಗೆ ಕಟ್ಟಡ ಶೀಥಿಲವಸ್ಥೆ ತಲುಪಿದ್ದು, ಹೊಸ ಕಟ್ಟಡ ನಿರ್ಮಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೈಕ್ಷಣಿಕವಾಗಿ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದರೂ ಸರ್ಕಾರಿ ಶಾಲೆಯ ಸಮಸ್ಯೆ ಬಗೆಹರಿಸುವ ಗೋಜಿಗೆ ಯಾವೋಬ್ಬರು ಹೋಗುತ್ತಿಲ್ಲವಾಗಿರುವುದು ವಿಪರ್ಯಾಸವಾಗಿದೆ.
ತಾಲೂಕಿನ ಸರ್ಕಾರಿ ಶಾಲೆಯ ಕಟ್ಟಡ ಮಂಜೂರಾತಿ ಹಾಗೂ ರಿಪೇರಿ ಯುಲ್ಲಿ ತಾರತಮ್ಯವಾಗುತ್ತಿದೆ. ಶಾಸಕರ ಆಪ್ತ ಶಿಕ್ಷಕರು, ಹಾಗೂ ಶಿಕ್ಷಣಾಧಿಕಾರಿಗಳ ಒಡನಾಡಿಗಳ ಮನವಿಗೆ ಹೆಚ್ಚಿನ ಮನ್ನಣೆ ದೊರೆತು ಸಮಸ್ಯೆ ಬಗೆಹರಿಯಲಿದೆ ಎನ್ನುವ ಮಾತು ಶಿಕ್ಷಕ ಸಮುದಾಯದಿಂದ ಈ ಹಿಂದಿನಿOದಲೂ ಕೇಳಿ ಬರುತ್ತಿದೆ. ಕಳೆದ ಮೂರು ವರ್ಷದಿಂದ ಶಾಸಕರಿಗೆ ಮನವಿ ನೀಡುತ್ತಾ ಬಂದಿದ್ದು, ಒಂದು ವರ್ಷದ ಹಿಂದೆ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಗ್ರಾಮಕ್ಕೆ ಭೇಟಿ ನೀಡಿದಾಗ ಶಾಲೆಗೆ ಬಂದು ಹೊಸ ಕಟ್ಟಡ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ವರ್ಷ ಕಳೆದರೂ ಈ ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿದೆ. ಇದೀಗ ಕಟ್ಟಡದ ಮೇಲ್ಚಾವಣೆ ಕುಸಿಯುತ್ತಿದ್ದು, ಈಗಲಾದರು ಸಂಭದಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು, ಈ ಸಮಸ್ಯೆ ಬಗೆಹರಿಸುವ ಮೂಲಕ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕಿದೆ.
ಈ ಸಂದರ್ಭದಲ್ಲಿ ಮಾದ್ಯಮದವರೋಂದಿಗೆ ಶಾಲಾ ಎಸ್.ಡಿ.ಎಂ.ಸಿ ಸದಸ್ಯ ಸುಬ್ರಹ್ಮಣ್ಯ ಭಟ್ ಮಾತನಾಡಿ ಈ ಶಾಲೆಯಲ್ಲಿ ಎರಡು ಕೋಠಡಿ ಇದ್ದು, ಮೂರು ವರ್ಷದಿಂದ ಮನವಿ ನೀಡುತ್ತಾ ಬಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಕೋರೋನಾ ಕಾರಣದಿಂದ ಬಂದ್ ಇದ್ದ ಶಾಲೆ ಆರಂಭಕ್ಕೆ ಆದೇಶ ಬಂದಿದ್ದು, ವಿದ್ಯಾರ್ಥಿಗಳಿಗೆ ತರಗತಿ ಎಲ್ಲಿ ನಡೆಸುದು ಎನ್ನುವ ಚಿಂತೆ ಕಾಡುತ್ತಿದೆ. ತಾತ್ಕಲಿಕ ಕಟ್ಟಡದ ಮೇಲೆ ವಿಶ್ವಾಸವಿಲ್ಲ. ಹೊಸ ಕಟ್ಟಡ ಮಂಜೂರಾಗದೇ ಹೋದಲ್ಲಿ ತಹಶೀಲ್ದಾರ ಕಛೇರಿಯ ಮುಂಭಾಗದಲ್ಲಿ ಪಾಲರು ವಿದ್ಯಾರ್ಥಿ ಒಡಗೂಡಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದರು.
ಕರವೇ ಹೊನ್ನಾವರ ತಾಲೂಕ ಅಧ್ಯಕ್ಷ. ಮಂಜುನಾಥ ಗೌಡ ಮಾತನಾಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುತ್ತಾರೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳ ಶಿಕ್ಷಣದ ಕಾಳಜಿ ವೇದಿಕೆಯ ಭಾಷಣಕ್ಕೆ ಮಾತ್ರ ಸೀಮೀತ ಎನ್ನುವಂತಿದೆ. ಇವರ ಶಿಕ್ಷಣ ಕೊಡುಗೆ ಇಂತಹ ಶಾಲೆ ಸ್ಥಿತಿ ನೋಡಿದರೆ ತಿಳಿಯುತ್ತದೆ. ಸರ್ಕಾರಿ ಕನ್ನಡ ಶಾಲೆಯ ಪರಿಸ್ಥಿತಿ ಅಧೋಗತಿ ತಲುಪಿದೆ. ನಾಚಿಕೆ ಮಾನ ಮರ್ಯಾದೆ ಇದ್ದಲ್ಲಿ ಈ ಶಾಲೆಯ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು,…
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,