ಕಾರವಾರ: ಹೊಸ ಪೀಳಿಗೆಗೆ ಹೊಸ ವಿಚಾರ ಹೊಳೆಯುವ ಹಾಗೆ ಡಾ.ದಿನಕರ ದೇಸಾಯಿ, ಡಾ.ಗೌರೀಶ ಕಾಯ್ಕಿಣಿ, ಸಮಾಜವಾದಿ ಹೋರಾಟಗಾರ ಶಂಕರ ಕೇಣಿ ಅವರ ಹೆಸರಿನಲ್ಲಿ ಉಪನ್ಯಾಸ ಮಾಲಿಕೆ ಹಾಗೂ ಕಾವ್ಯ ಪುರಸ್ಕಾರ ಪ್ರತಿ 2 ವರ್ಷಕ್ಕೊಮ್ಮೆ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ (ರಿ) ಅಂಕೋಲಾ ಇದರ ಅಧ್ಯಕ್ಷರು, ಹಿರಿಯ ಪತ್ರಕರ್ತರು ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಆದ ಅಮ್ಮೆಂಬಳ ಆನಂದ ಅವರು ಹೇಳಿದರು.
ಅವರು ಜೂನಿಯರ್ ಪಿ. ಎಂ. ಕಾಲೇಜಿನ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ಪ್ರತಿಷ್ಠಾನವು ಆಯೋಜಿಸಿದ ಶಂಕರ ಕೇಣಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರತಿಷ್ಠಾನವು 38 ವರ್ಷಗಳಿಂದ ಕಾವ್ಯ ಪುರಸ್ಕಾರ ಮತ್ತು ಕಳೆದ 10 ವರ್ಷಗಳಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ದಿನಕರ ದೇಸಾಯಿ ಕಾವ್ಯ ಪುರಸ್ಕಾರಕ್ಕೆ ಬರುವ ವರ್ಷದಿಂದ 25 ಸಾವಿರ ರು. ಪುರಸ್ಕಾರ ನೀಡಲಾಗುವುದು ಮತ್ತು ಪ್ರತಿಷ್ಠಾನವು 10 ಲಕ್ಷ ರು. ಖಾಯಂ ಠೇವಣಿ ಹೊಂದುವ ಯೋಜನೆ ಹೊಂದಲಾಗಿದೆ ಎಂದರು.
ವಿಸ್ಮಯ ನ್ಯೂಸ್, ಕಾರವಾರ