ಭಟ್ಕಳ: ಇಲ್ಲಿನ ತಾಲೂಕು ಶಿಕ್ಷಣಾಧಿಕಾರಿ ಕಚೇರಿಯನ್ನು ಭಟ್ಕಳ ಜೆ.ಎಮ್.ಎಫ್ ಸಿ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಗಿದೆ. ಜಮಾತುಲ್ ಮುಸ್ಲಿಮಿನ್ ಮುಗ್ದುಮ್ ಕಾಲೋನಿ ಇವರ ಕಟ್ಟಡದಲ್ಲಿನ ಸರ್ಕಾರಿ ಉರ್ದು ಪ್ರಾರ್ಥಮಿಕ ಶಾಲೆಯ ಬಾಡಿಗೆಯನ್ನು ಕಳೆದ 19 ವರ್ಷದಿಂದ ಬರಿಸಿದ ಕಾರಣ ಭಟ್ಕಳ ನ್ಯಾಯಾಲಯ ಕಛೇರಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದ್ದು, ಈ ಹಿನ್ನೆಲೆ ನ್ಯಾಯಾಲಯದ ಸಿಬ್ಬಂದಿಗಳು ಜಪ್ತಿಪಡಿಸಲಾದ ಉಪಕರಣಗಳನ್ನು ವಶಕ್ಕೆ ಪಡೆದರು.
ಜಮಾತೆ ಮುಸ್ಲಿಮೀನ್ ಸಂಸ್ಥೆಗೆ ಅಲ್ಲಿನ ಕಟ್ಟಡದಲ್ಲಿ ಶಾಲೆ ಯನ್ನು 40 ವರ್ಷಗಳಿಂದ ನಡೆಸಿದರೂ 1.50ಲಕ್ಷ ಬಾಡಿಗೆ ನೀಡುವಂತೆ ಭಟ್ಕಳ ಜೆ.ಎಂ.ಎಫ್.ಸಿ ಕೋರ್ಟ ನೀಡಿದ ತೀರ್ಪು ಪಾಲನೆ ಮಾಡದ ಕಾರಣ ಈ ಜಪ್ತಿ ಆದೇಶ ಮಾಡಲಾಗಿದ್ದು, ಶಿಕ್ಷಣ ಇಲಾಖೆಯ ಕಛೇರಿಯ ಪೀಠೋಪಕರಣ ಹಾಗೂ ವಾಹನವನ್ನು ಭಟ್ಕಳ ಜೆ.ಎಂ.ಎಫ್ .ಸಿ ನ್ಯಾಯಾಲಯ ಜಪ್ತಿ ಮಾಡಿದೆ.
ಸುಮಾರು 20 ವರ್ಷದಿಂದ ಶಿಕ್ಷಣಾಧಿಕಾರಿ ಕಚೇರಿಯಿಂದ ಕಟ್ಟಡದ ಬಾಡಿಗೆ ಕಟ್ಟದ ಕಾರಣ (ಸುಮಾರು 1,49,000 ಕಟ್ಟಬೇಕಾದ ಬಾಡಿಗೆ ಹಣ) ಜಮಾತೆ ಮುಸ್ಲೀಂಮಿನ್ ಆಫ್ ಮುಗ್ದಂ ಕಾಲೋನಿಯ ಕಾರ್ಯದರ್ಶಿ 2005 ರಲ್ಲಿ ಭಟ್ಕಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಭಟ್ಕಳ ನ್ಯಾಯಾಲಯ ಸೆಪ್ಟೆಂಬರ್ 14 ರಂದು ಬಿ. ಇ. ಓ. ಕಛೇರಿಯಲ್ಲಿನ ಉಪಕರಣಗಳು ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ತಾಲೂಕಿನ ª ಜೆ.ಎಮ್.ಎಫ್.ಸಿ ನ್ಯಾಯಾಲಯದ ಬೆಲೀಫ್ ರಾದ ಗಣಪತಿ ಅವರು ಬಿ.ಈ.ಓ ಕಛೇರಿಗೆ ಬಂದು ನ್ಯಾಯಲಯದ ವಾರಂಟ್ ಹೊರಡಿಸಿ ಜಪ್ತಿ ನಿಯಮ ಜಾರಿಗೆ ಮಾಡಿ ವಸ್ತುಗಳನ್ನು ಜಪ್ತಿ ಮಾಡಿಕೊಂಡರು.
9 ಕಂಪ್ಯೂಟರ್ , 66 ಫೈಬರ್ ಚೇರ್ , 26 ಕುರ್ಚಿ , 26 ಟೇಬಲ್ , 1 ವಾಹನ ಹಾಗೂ 2 ಮೆಟಲ್ ಟೇಬಲ್ ಅನ್ನು ಜಪ್ತಿ ಮಾಡಲಾಯಿತು. ಈ ವೇಳೆ ಕಚೇರಿಗೆ ನ್ಯಾಯಾಲಯದಲ್ಲಿ ದಾವೆ ಹಾಕಿದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಬಂದಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಒಂದು ತಿಂಗಳ ಅವಧಿಯನ್ನು ಕೇಳಿದ್ದಾರೆ.
ಆದರೆ., ಜಮಾತುಲ್ ಮುಸ್ಲಿಮಿನ್ ಅವರು ನ್ಯಾಯಾಲಯದ ಆದೇಶಕ್ಕೆ ವಿರುದ್ದವಾಗಿ ನಾವು ನಡೆದುಕೊಳ್ಳಲು ಸಾಧ್ಯವಿಲ್ಲ ಜಪ್ತಿಯ ಆದೇಶದಂತೆ ನಮಗೆ ಸಿಗಬೇಕಾದ ಹಣ ನೀಡಬೇಕು. ಇದಕ್ಕೆ ನ್ಯಾಯಾಲಯದ ಆದೇಶದಂತೆ ಮುಂದುವರೆಯಲಿ ಎಂದಿದ್ದಾರೆ.
ಅoತ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೆರ ಅವರು ಇದರಲ್ಲಿ ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ನಾನು ನಡೆದುಕೊಳ್ಳಬೇಕಿದೆ. ಅವರು ಒಂದು ತಿಂಗಳ ಅವಧಿಯಲ್ಲಿ ಹಣ ಪಾವತಿ ಮಾಡುವುದಾಗಿ ಹೇಳಿದ್ದು ಇದಕ್ಕೆ ಜಮಾತುಲ್ ಮುಸ್ಲಿಮಿನ್ ಮುಗ್ದುಮ್ ಕಾಲೋನಿ ಅವರು ಅವಕಾಶ ನೀಡಬೇಕೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್, ಉದಯ್ ಎಸ ನಾಯ್ಕ, ಭಟ್ಕಳ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537