ಅಂಕೋಲಾ: ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತದಿಂದಾಗಿ ಹಿಂದುಳಿದ ಬಡ ಸಿದ್ಧಿ ಕುಟುಂಬ ವಾಸಿಸುತ್ತಿರುವ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ – ಕಮ್ಮಾಣಿ ಗ್ರಾಮದ ದೊಡ್ಡಕಟ್ಟು ಸಿದ್ದಿಕೇರಿಯಲ್ಲಿ ಸಂಭವಿಸಿದೆ.
ತಾಲೂಕಿನ ಅತೀ ಹಿಂದುಳಿದ ,ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶವಾದ ಕಮ್ಮಾಣಿ – ದೊಡ್ಡಕಟ್ಟು ಮಜಿರೆಯ ಕೊನೆಯಲ್ಲಿರುವ ಕಮಲಾ ಫಕೀರಾ ಸಿದ್ದಿಯವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ, ಮನೆ ಸುಟ್ಟು ಭಸ್ಮವಾಗಿದೆ.
ಮನೆಯಲ್ಲಿದ್ದ ಧವಸ-ಧಾನ್ಯಗಳು, ಬಟ್ಟೆ, ಮನೆಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅಪಾರ ಹಾನಿ ಸಂಭವಿಸಿದೆ. ಡೋಂಗ್ರಿ ಗ್ರಾಪಂ ಪಿಡಿಓ ಗಿರೀಶ ನಾಯಕ ಹಾಗೂ ಪಂಚಾಯತ ಉಪಾಧ್ಯಕ್ಷರು ಮತ್ತಿತರರು ತೆರಳಿ ಹಾನಿ ಪರಿಶೀಲಿಸಿದರು ಮತ್ತು ಪಂಚಾಯತ್ ವತಿಯಿಂದ ರೂ 5000 ತುರ್ತು ನೆರವು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಆದ್ಯತೆಯ ಮೇಲೆ ಹೊಸ ಮನೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು.. ಗಿರೀಶ ನಾಯಕ ಸಹ ವೈಯಕ್ತಿಕ ಕಿರು ನೆರವು ನೀಡಿದರು.
ಬೆಂಕಿ ಅವಘಡದ ಸುದ್ದಿ ಕೇಳಿದ, ಶಾಸಕಿ ರೂಪಾಲಿ ನಾಯ್ಕ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ, ನೊಂದ ಕುಟುಂಬಕ್ಕೆ ವೈಯಕ್ತಿಕ ನೆಲೆಯಲ್ಲಿ ದಿನಬಳಕೆಯ ಅಗತ್ಯ ವಸ್ತುಗಳನ್ನು ಹಾಗೂ ತುರ್ತು ಆರ್ಥಿಕ ಸಹಾಯವನ್ನು ನೀಡುವ ಮೂಲಕ ಮಾನವೀಯ ನೆರವು ನೀಡಿದಂತಿದೆ..
ಎಂ ಎಲ್ ಸಿ ಶಾಂತಾರಾಮ ಸಿದ್ದಿ ಸಹ ಈ ಬಡ ಕುಟುಂಬಕ್ಕೆ ತಾತ್ಕಾಲಿಕ ಸೂರು ನಿರ್ಮಿಸಲು ಅಗತ್ಯ ಮೇಲ್ಚಾವಣೆ ಹೊದಿಕೆ (ಶೀಟ್) ನೀಡಿ ನೆರವಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537