ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಎಲ್ಲ ಶಿಕ್ಷಕ ವಿದ್ಯಾರ್ಥಿಗಳು, ಬೋಧಕ / ಬೋಧಕೇತರ ಸಿಬ್ಬಂದಿಗಳು ಸಾಮೂಹಿಕ ನಾಡಗೀತ ಗಾಯನವನ್ನು ನೆರವೇರಿಸಿದರು. ಹಾಗೂ ನಾಡಗೀತೆ ಸ್ಪರ್ಧೆಯನ್ನು ಮತ್ತು ಕನ್ನಡದ ಮಕ್ಕಳ ಪದ್ಯಗಳ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದರು.
ನಾಡಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕುಮಾರಿ. ಮಂಜುಳಾ ಭಟ್ಟ, ದ್ವಿತೀಯ ಬಹುಮಾನ ಕುಮಾರಿ. ಸಹನಾ ಎಸ್. ಎಚ್. ಹಾಗೂ ಮೂರನೇ ಬಹುಮಾನ ದೀಪಾ ಭಟ್ಟ ಇವರು ಪಡೆದುಕೊಂಡರು ಹಾಗೂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕುಮಾರಿ. ಅಶ್ವಿನಿ ಬಾಂದೇಕರ, ದ್ವಿತೀಯ ಬಹುಮಾನ ಕುಮಾರಿ. ಜ್ಯೋತಿ ನಾಯ್ಕ ಹಾಗೂ ಮೂರನೇ ಬಹುಮಾನ ಕುಮಾರಿ. ರಮ್ಯಾ ಭಟ್ಟ ಮತ್ತು ಕುಮಾರ. ವೆಂಕಟ್ರಮಣ ಹೆಗಡೆ ಪಡೆದುಕೊಂಡಿದ್ದಾರೆ.