Follow Us On

WhatsApp Group
Important
Trending

90 ವರ್ಷದ ಪರಿಸರ ಪ್ರೇಮಿಗೆ ರಾಜ್ಯೋತ್ಸವ ಪ್ರಶಸ್ತಿ: ಇವರ ಸಾಧನೆಗೆ ಏನು ಗೊತ್ತಾ?

ಜೋಯಿಡಾ: ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, 66 ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ 90ರ ವೃದ್ಧರೊಬ್ಬರಿಗೆ ಪ್ರಶಸ್ತಿ ಘೋಷಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಅತೀ ಹಿಂದುಳಿದ ಪ್ರದೇಶವಾದ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿಯ ಕಾರ್ಟೋಳಿ ಎಂಬ ಗ್ರಾಮದವರಾದ ಮಾದೇವ ವೇಳಿಪ ಪ್ರಶಸ್ತಿಗೆ ಭಾಜನರಾದ ಕಲಾವಿದರು.

ಇವರು ಪರಿಸರ ಮತ್ತು ಕಾಲ ಮಾನಕ್ಕೆ ತಕ್ಕಂತೆ ಜಾನಪದ ಹಾಡುಗಳನ್ನು ಸುಮಾರು ಸಾವಿರ ಲೆಕ್ಕ ದಲ್ಲಿ ನಿರಂತರವಾಗಿ ಹಾಡುವಂಥ ಕಲೆ ಕರಗತ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜಾನಪದ ಪ್ರಶಸ್ತಿ ಕೂಡಾ ಲಭಿಸಿತ್ತು.

ಮಹಾದೇವ ವೇಳಿಪ(೯೦ ವರ್ಷ) ಕಾರ್ಟೋಲಿ ನಿವಾಸಿ ತಾ: ಜೊಯಿಡಾ. ಕುಣಬಿ ಬುಡಕಟ್ಟು ಸಮುದಾಯದ ಹಿರಿಯರು, ಮಳೆ,ಪಕ್ಷಿ,ಗಿಡಮರಗಳ ಬಗ್ಗೆ ರಾಮಾಯಣ,ಮಹಾಭಾರತ ಸಾಂಪ್ರಾದಯಕ ಹಾಡುಗಳ ಹಾಡುತ್ತಾರೆ.

ಇವರು ಗಿಡಮೂಲಿಕೆ ಔಷಧ ನೀಡುವಲ್ಲಿ ಕೂಡಾ ಪರಿಣಿತರು. ಅಪರೂಪದ ಗಡ್ಡೆ ಗೆಣಸು ಬೇಳೆಗಾರರಾಗಿದ್ದು, 3 ಗಂಡು ಮತ್ತೆ 4 ಹೆಣ್ಣು ಮಕ್ಕಳಿದ್ದು,ಪತ್ನಿ ಪಾರ್ವತಿ ವೇಳಿಪ 10 ವರ್ಷದ ಹಿಂದೆ ತೀರಿಕೊಂಡಿದ್ದಾರೆ.

ಪರಿಸರ ಕಾಳಜಿಗೆ ಮೆಚ್ಚಿ ನೋಡಿ ಈ ಹಿಂದೆ ಜೋಯ್ಡಾಗೆ ಬಂದಾಗ ದಿವಂಗತ ಪುನಿತ್ ರಾಜ್ ಕುಮಾರ್ ಸಹ ಇವರನ್ನು ಭೇಟಿ ಮಾಡಿ ಹೋಗಿದ್ದರು.

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

ವಿಸ್ಮಯ ನ್ಯೂಸ್ ಜೋಯ್ಡಾ

Back to top button