ಮಳೆ ಬಂದರೆ ಕೆಸರು ಗೆದ್ದೆ, ಬಿಸಿಲು ಬಂದರೆ ದೂಳು: ಈ ರಸ್ತೆ ಸಾರ್ವಜನಿಕರ ಓಡಾಟ ಮಾಡಲು ಹರಸಾಹಸ

ಹೊನ್ನಾವರ: ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹೆರೆಂಗಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಸ್ಲಿಂ ಕೇರಿಗೆ ತೆರಳುವ ರಸ್ತೆಯ ದುಸ್ಥಿತಿ ನೋಡಿ.. ಕಳೆದ ಹತ್ತುವರ್ಷದಿಂದ ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಶಾಸಕರ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಹೊನ್ನಾವರ ಪಟ್ಟಣದಿಂದ ಗೇರುಸೋಪ್ಪಾ ಮಾರ್ಗದ ಹೆದ್ದಾರಿಯಲ್ಲಿ ಸರಿ ಸುಮಾರು 25 ಕೀಲೋಮೀಟರ ದೂರದಲ್ಲಿ ಹೆರೆಂಗಡಿ ಗ್ರಾಮ ಪಂಚಾಯತ, ಗ್ರಾಮ ಪಂಚಾಯತ ವ್ಯಾಪ್ತಿಯ ಎರ್ಜಿನಮೂಲೆ ಹೆರೆಂಗಡಿ ಮುಸ್ಲೀಮಕೇರಿ ಮುಂತಾದ ಭಾಗಗಳಿಗೆ ಇದೆ ರಸ್ತೆಯಿಂದಲೆ ಸಾಗಬೇಕಾಗಿದೆ . ಕಳೇದ ಎರಡು-ಮೂರು ವರ್ಷಗಳಿಂದ ಶಾಸಕ ಸುನೀಲ್ ನಾಯ್ಕ ಗ್ರಾಮಕ್ಕೆ ಬೇಟಿನೀಡಿದಾಗಲೆಲ್ಲಾ ಗ್ರಾಮಸ್ಥರು ರಸ್ತೆ ಮಾಡಿಸಿಕೋಡಿ ಎಂದು ಮನವಿ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ಗ್ರಾಮಸ್ಥರಾದ ತಾಜುದ್ದಿನ್ ಅಬ್ದುಲ್ ರೆಹಮಾನ ಮಾತನಾಡಿ, ಮುಖ್ಯ ರಸ್ತೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ ಈ ರಸ್ತೆ . ಈ ರಸ್ತೆಯಲ್ಲಿ ಯ್ಯಾರು ತಿರುಗಾಡುವಂತಿಲ್ಲಾವಾಗಿದೆ . ಈ ಭಾಗದಲ್ಲಿ ಇಲ್ಲಿ 2500 ರಿಂದ 3 ಸಾವಿರ ಜನಸಂಖೆ ಇದೆ. 500 ರಿಂದ 550 ಮನೆಗಳಿದೆ. ಶಾಸಕರು ಕೆಲವುದಿನಗಳ ಹಿಂದೆ ಗ್ರಾಮಕ್ಕೆ ಬಂದಾಗಲು ವಿಷಯ ತಿಳಿಸಿದ್ದೆವೆ ಶಾಸಕರು ಎರಡು ತಿಂಗಳ ಒಳಗಾಗಿ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸಾರ್ವಜನಿಕರು ಮುಂತಾದವರು ಇದ್ದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Exit mobile version