ತಾಲೂಕಾ ಒಕ್ಕಲಿಗ ಯಕ್ಷಗಾನ ಬಳಗದ ಮೂರನೇ ವರ್ಷದ ಯಕ್ಷೊತ್ಸವ ಸಮಾರಂಭ: ಸಾಧಕರಿಗೆ ಸನ್ಮಾನ

ಹೊನ್ನಾವರ: ತಾಲೂಕಾ ಒಕ್ಕಲಿಗ ಯಕ್ಷಗಾನ ಬಳಗದ ಮೂರನೇ ವರ್ಷದ ಯಕ್ಷೊತ್ಸವ ಸಮಾರಂಭ ಹೊನ್ನಾವರ ತಾಲೂಕಿನ ಕೆಳಗೀನೂರ ಹೊಸಾಕುಳಿಯ ಒಕ್ಕಲಿಗ ಸಭಾಭವನದಲ್ಲಿ ನಡೆಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಜನಪದ ವಿದ್ವಾಂಸರು, ನಿವೃತ್ತ ಪ್ರಾಚಾರ್ಯರಾದ ಡಾ. ಎನ್.ಆರ್. ನಾಯಕ ದೀಪ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು, ಇದೀಗ ಸಾಂಸ್ಕ್ರತಿಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು ಯಕ್ಷಗಾನದಿಂದಲೇ. ಉಳಿಕ ಕಲೆ ಕನ್ನಡವನ್ನು ನಾಶ ಮಾಡುತ್ತಿದೆ. ಅಲ್ಲದೇ ಈ ಕಲೆ ಸಾಂಸ್ಕ್ರತಿಕ ಸೊಗಡನ್ನು ಹೆಚ್ಚಿಸುತ್ತಿದ್ದು ಜಾಗತೀಕ ಮಟ್ಟದಲ್ಲಿಯೂ ಇದರ ಕಂಪನ್ನು ಪಸರಿಸಿದೆ. ಕಲೆ ಹಾಗೂ ಕಲಾವಿದರನ್ನು ಗೌರವಿಸೋಣ ಎಂದರು.

ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ ಸರ್ಕಾರಗಳು ಕೋವಿಡ್ ನೆಪವೊಡ್ಡಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಆದರೆ ಚುನಾವಣೆಗೆ ಅವಕಾಶ ನೀಡುತ್ತಿದೆ. ಕಲೆ ಹಾಗೂ ಕಲಾವಿದರಿಗೆ ಕೊಡುಗೆ ನೀಡಲು ಸರ್ಕಾರ ಮುಂದಾಗಬೇಕಿದೆ. ಕಲಾವಿದರಿಗೆ ಭದ್ರತೆ ನೀಡುವಂತಾಗಬೇಕಿದೆ ಎಂದರು.

ನಿವೃತ್ತ ಉಪನ್ಯಾಸಕರು ಸಾಹಿತಿಗಳು ಆದ ಎಸ್ ಡಿ ಹೆಗಡೆ ಮಾತನಾಡಿ ನಮ್ಮ ಜಿಲ್ಲೆಯ ಜನಪ್ರತಿನಿದಿಗಳಿಗೆ ಕಲೆ ಸಾಹಿತ್ಯ ಸಂಸ್ಕçತಿಯ ಬಗ್ಗೆ ಯಳ್ಳಷ್ಟು ಗೌರವವಿಲ್ಲ. ಇಂತವರನ್ನು ಆರಿಸಿ ಕಳಸಿರುವುದು ನಮ್ಮ ದೌರ್ಬಾಗ್ಯ. ಎಲ್ಲಿಯವರೆಗೆ ನಾವು ಪ್ರಜ್ಞಾವಂತ ನಾಗರಿಕರಾಗುವುದಿಲ್ಲವೋ ಅಲ್ಲಯವರೆಗೆ ಕಲೆ ಸಂಸ್ಕçತಿ ಸಾಹಿತ್ಯ ಬೇಳಸಲು ಸಾಧ್ಯವಿಲ್ಲಾ. ಈ ಯಕ್ಷಗಾನ ಬಳಗ ನೂರಾರು ವರ್ಷ ಚಿರಾಯುವಾಗಲಿ ಎಂದು ಹಾರೈಸಿದರು,

ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದರನ್ನು, ಕಲಾಪೋಷಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು, ಸಭಾ ಕಾರ್ಯಕ್ರಮದ ಮೊದಲು ” ವೀರಮಣಿ ಕಾಳಗ” ತಾಳಮದ್ದಲೆ. ಸಭಾ ಕಾರ್ಯಕ್ರಮದ ನಂತರ “ಸುದರ್ಶನ ವಿಜಯ, ಸುಧನ್ವಾರ್ಜುನ” ಯಕ್ಷಗಾನ ಪ್ರದರ್ಶನ ನಡೆದವು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Exit mobile version