ಗೋಕರ್ಣ: ಹಿಟಾಚಿ ಮೂಲಕ ಗುಡ್ಡದ ಮಣ್ಣು ಕೊರೆಯುವಾಗ ಮಣ್ಣು ಕುಸಿದು ಗುಡ್ಡದ ಪಕ್ಕದಲ್ಲಿ ನಿಂತ ವ್ಯಕ್ತಿಯ ಮೇಲೆ ರಾಶಿ ರಾಶಿ ಮಣ್ಣು ಬಿದ್ದ ಪರಿಣಾಮವಾಗಿ ಮಣ್ಣಿನಡಿ ಸಿಲುಕಿದ ವ್ಯಕ್ತಿ ಮೃತ ಪಟ್ಟ ಘಟನೆ ಗೋಕರ್ಣದ ಚೌಡಗೇರಿ ಗ್ರಾಮದಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಭಾಸಗೋಡ – ಶೀಳ್ಯ ಗ್ರಾಮದ ಮೋಹನದಾಸ ಹಮ್ಮಣ್ಣ ನಾಯಕ (55) ಎಂಬಾತನೇ ಮಣ್ಣಿನಡಿ ಸಿಲುಕಿ ಮೃತ ಪಟ್ಟ ದುರ್ದೈವಿಯಾಗಿದ್ದಾನೆ.,
ಗೋಕರ್ಣದ ಚೌಡಗೇರಿಯ ಜಟ್ಟು ನಾರಾಯಣ ದೇಶಭಂಡಾರಿ ಎನ್ನುವವರಿಗೆ ಸೇರಿದ್ದ ಮಾಲಕಿ ಜಮೀನಿನಲ್ಲಿ ಯಾವುದೇ ಸುರಕ್ಷತಾ ಕ್ರಮ ಹಾಗೂ ಜೀವರಕ್ಷಕ ವ್ಯವಸ್ಥೆ ಇಲ್ಲದೇ ಗುಡ್ಡ ಕೊರೆದು ಗಂಗಾವಳಿ – ಮಂಜುಗುಣಿ ನದಿಗೆ ನಿರ್ಮಸಲಾಗುತ್ತಿರುವ ಸೇತುವೆ ಕಾಮಗಾರಿಗೆ ಮಣ್ಣು ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಹಿಟಾಚಿ ಚಾಲಕ ಝಾರ್ಖಂಡ ಮೂಲದ ಹಾಲಿ ಹನೇಹಳ್ಳಿ ನಿವಾಸಿ ಮನೋಜಕುಮಾರ್ ಚೌದರಿ ಎಂಬಾತ ಗುಡ್ಡ ಕುಸಿಯುವ ಸಾಧ್ಯತೆ ಇದ್ದರೂ ನಿರ್ಲಕ್ಷ್ಯದಿಂದ ಮಣ್ಣು ಕೊರೆಯುವ ಕೆಲಸಕ್ಕೆ ಇಳಿದಿರುವುದರಿಂದ ಗುಡ್ಡದ ಮಣ್ಣು ಕುಸಿತವಾಗಲು ಕಾರಣವಾಗಿದೆ ಎಂದು, ಜಮೀನಿನ ಮಾಲಿಕ ಮತ್ತು ಹಿಟಾಚಿ ಚಾಲಕನ ಮೇಲೆ ದೂರು ದಾಖಲಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಂಬಂಧಿಸಿದ ಇತರ ಸಂಬಂಧಿಸಿದ ಇತರೆ ಇಲಾಖೆಗಳ ಪರವಾನಿಗೆ ಪಡೆಯದಿರುವುದು,ಇಂತಹ ದುರ್ಘಟನೆಗಳು ನಡೆದ ನಂತರ ಅವು ಬೆಳಕಿಗೆ ಬರುವುದು ವಿಪರ್ಯಾಸವೇ ಸರಿ.
ಈ ಕುರಿತು ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಸಿ ಪಿ ಐ ವಸಂತ ಆಚಾರಿ, ಪಿ ಎ ಸೈ ನವೀನ ನಾಯ್ಕ, ಸುಧಾ ಅಘನಾಶಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಬ್ಬಂದಿ ಜಿಬಿ ರಾಣೆ, ಅರುಣ ಮುಕ್ಕಣ್ಣನವರ , ವಸಂತ ನಾಯ್ಕ, ಅರವಿಂದ ಶೆಟ್ಟಿ, ಅನುರಾಜ ನಾಯ್ಕ, ಶಿವಾನಂದ ಗೌಡ ಹಾಜರಿದ್ದರು.
ಮೃತ ಮೋಹನ ನಾಯಕ, ಶೀಳ್ಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಲ್ಲದೇ, ಈ ಹಿಂದೆ ಬಾಸಗೋಡದ ಶಾಸಕರ ಮಾದರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು,ತನ್ನ ಸರಳ ನಡೆ ನುಡಿಗಳ ಮೂಲಕ ಮತ್ತು ರೈತಾಬಿ ಹಾಗೂ ಶ್ರಮ ಜೀವನದ ಮೂಲಕ ಹಲವರ ಪ್ರೀತಿ ವಿಶ್ವಾಸ ಗಳಿಸಿದ್ದರು. ಮೋಹನ ನಾಯಕ ಅಕಾಲಿಕ ನಿಧನದಿಂದ ಕುಟುಂಬ ಹಾಗೂ ಊರಿನಲ್ಲಿ ಶೋಕ ಆವರಿಸಿದೆ..
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537