ಕಾರು, ಬಸ್ ಮುಖಾಮುಖಿ ಡಿಕ್ಕಿ: ಪ್ರಯಾಣಿಕರನ್ನು ಇಳಿಸುತ್ತಿದ್ದ ನಿಂತ ಬಸ್ಸಿಗೆ ಗುದ್ದಿದ ಲಾರಿ


ಯಲ್ಲಾಪುರ: ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಕಾರ್ ನಡುವೆ ಭೀಕರ ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯವಾಗಿಲ್ಲ. ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ ಹಾಗು ಗುಜರಾತ್‌ನಿಂದ ಪುತ್ತೂರಿಗೆ ಹೊರಟಿದ್ದ ಕಾರ್ ನಡುವೆ ಮಾವಳ್ಳಿ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಆಗಿದ್ದು, ಕಾರಿನಲ್ಲಿದ್ದ ತಂದೆ ಮಗನ ಪವಾಡ ಸದೃಶರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಇದೇ ವೇಳೆ, ಇನ್ನೊಂದು ಘಟನೆಯಲ್ಲಿ ಪ್ರಯಾಣಿಕರನ್ನು ಇಳಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದಲ್ಲಿ ನಡೆದಿದೆ. ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿಯೊಂದು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ನಿಂತ ಬಸ್ಸಿಗೆ ಗುದ್ದಿದೆ. ಅತಿ ವೇಗ ಮತ್ತು ನಿಷ್ಕಾಳಜಿಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಈ ಘಟನೆಯಲ್ಲಿ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ ಮಹಿಳೆಯೊಬ್ಬಳಿಗೆ ತೀವ್ರ ಗಾಯವಾಗಿದೆ.ಆಸ್ಪತ್ರೆಗೆ ದಾಖಲಿಸಲಾಗಿದೆ.ಲಾರಿ ಚಾಲಕ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಯೋಗೇಶ ಬಬಣ ಸಿಂಧೆ ವಿರುದ್ಧ ಪ್ರಕರಣ ದಾಖಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಲಾರಿ ಚಾಲಕನನ್ನು ಮಹಾರಾಷ್ಟ್ರದ ಜೀರಫ್‌ಬಾಡಿಯ ಯೋಗೇಶ ಬಬಣ ಸಿಂಧೆ ಎಂದು ಗುರುತಿಸಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ಲಕ್ಷ್ಮೀ ನರಸಿಂಹ, ರೂಫಿಂಗ್ ಪ್ರೊಡಕ್ಟ್ಸ್ : ರೂಫಿಂಗ್ ಪ್ರೊಡಕ್ಟ್ಸ್ ಗಳು ಕರಾವಳಿಯಲ್ಲಿ ಪ್ರಪ್ರಥಮಬಾರಿಗೆ ಇದೀಗ ಕುಮಟಾದಲ್ಲಿ ಆರಂಭಗೊಂಡಿದ್ದು,, ಗ್ರಾಹಕರ ಅವಶ್ಯಕತೆಗನುಗುಣವಾಗಿ ಬೇಕಾದ ಅಳೆತೆಯ ಬಣ್ಣಬಣ್ಣದ ಮೇಲ್ಚಾವಣಿ ತಯಾರಿಸಿಕೊಡಲಾಗುವುದು. ನಮ್ಮಲ್ಲಿ ಎಲ್ಲಾ ತರಹದ ಕಲರ್ ರೂಫಿಂಗ್ ಶೀಟ್ಸ್, ಕ್ರಿಂಪಿoಗ್ ಶೀಟ್ಸ್, ರಿಡ್ಜಸ್, ಚಾನಲ್ಸ್ ಮತ್ತು ಫ್ರೀ ಎಂಜಿನಿಯರಿoಗ್ ವರ್ಕ್ಸ್ ಮಾಡಿಕೊಡಲಾಗುವುದು. ಆಧುನಿಕ ತಂತ್ರಜ್ಞಾನದ ಮಷಿನ್‌ಗಳನ್ನು ಬಳಸಿಕೊಂಡು, ಬೇಡಿಕೆಗೆ ಅನುಗುಣವಾಗಿ ಇಲ್ಲಿಯೇ ಶೀಟ್ಸ್ ಗಳನ್ನು ಮಾಡಿಕೊಡಲಾಗುತ್ತದೆ. 9481871454, 7338328454

Exit mobile version