ಮನೆಗೆ ಬಡಿದ ಸಿಡಿಲು: ಮನೆಯ ಗೋಡೆ ಬಿರುಕು, ಮನೆಯೊಳಗಿನ‌ ವಸ್ತುಗಳಿಗೆ ಹಾನಿ

ಕುಮಟಾ : ತಾಲೂಕಿನಲ್ಲಿ ಇಂದು ಗುಡುಗು ಸಹಿತ ಮಳೆ ಸುರಿದಿದ್ದು, ಯಲವಳ್ಳಿ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೌದು ಯಲವಳ್ಳಿಯಲ್ಲಿ ಸಿಡಿಲು ಬಡಿದು ಮನೆಯೊಂದರ ಗೋಡೆಗಳು ಬಿರುಕುಬಿಟ್ಟಿದ್ದು, ಮನೆ ಛಿದ್ರವಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಇಂದು ಸಂಜೆ ಸುಮಾರು 5 ಗಂಟೆ ವೇಳೆ ಗುಡುಗು ಸಿಡಿಲಿನಿಂದ ಭಾರೀ ಶಬ್ದ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ವಿಸ್ಮಯ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಹೌದು, ತಾಲೂಕಿನ ಯಲವಳ್ಳಿಯ ನಾಗರಾಜ ಮಡಿವಾಳ ಹೊಸಮನೆ, ಅನ್ನುವವರ ಮನೆ ಸಿಡಿಲು ಬಡಿದು ಹಾನಿಯಾಗಿದೆ. ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆಗಳು ಬಿರುಕು ಬಂದಿದೆ. ಮನೆಯ ಹಂಚು, ಪಾತ್ರೆ ಸೇರಿದಂತೆ ವಸ್ತುಗಳು ಚಲ್ಲಾಪಿಲ್ಲಿಯಾಗಿದೆ.

ಸಿಡಿಲು ಬಡಿದಿದ್ದರಿಂದ ಮನೆಯ ಜನತೆ ಕಂಗಾಲಾಗಿದ್ದಾರೆ. ಮನೆಯ ಹಂಚುಗಳು ಛಿದ್ರವಾಗಿದ್ದು, ಮನೆಯ ಒಳಗೆ ಇದ್ದ ವಸ್ತುಗಳಿಗೂ ಹಾನಿಯಾಗಿದೆ. ಮನೆಗೆ ಆದ ಹಾನಿ ಭರಸಿಕೊಡಬೇಕೆಂದು ಸ್ಥಳೀಯರು ಅಧಿಕಾರಿಗಳು, ಶಾಸಕರಿಗೆ ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

ಶ್ರೀ ಲಕ್ಷ್ಮೀ ನರಸಿಂಹ, ರೂಫಿಂಗ್ ಪ್ರೊಡಕ್ಟ್ಸ್ : ರೂಫಿಂಗ್ ಪ್ರೊಡಕ್ಟ್ಸ್ ಗಳು ಕರಾವಳಿಯಲ್ಲಿ ಪ್ರಪ್ರಥಮಬಾರಿಗೆ ಇದೀಗ ಕುಮಟಾದಲ್ಲಿ ಆರಂಭಗೊಂಡಿದ್ದು,, ಗ್ರಾಹಕರ ಅವಶ್ಯಕತೆಗನುಗುಣವಾಗಿ ಬೇಕಾದ ಅಳೆತೆಯ ಬಣ್ಣಬಣ್ಣದ ಮೇಲ್ಚಾವಣಿ ತಯಾರಿಸಿಕೊಡಲಾಗುವುದು. ನಮ್ಮಲ್ಲಿ ಎಲ್ಲಾ ತರಹದ ಕಲರ್ ರೂಫಿಂಗ್ ಶೀಟ್ಸ್, ಕ್ರಿಂಪಿoಗ್ ಶೀಟ್ಸ್, ರಿಡ್ಜಸ್, ಚಾನಲ್ಸ್ ಮತ್ತು ಫ್ರೀ ಎಂಜಿನಿಯರಿoಗ್ ವರ್ಕ್ಸ್ ಮಾಡಿಕೊಡಲಾಗುವುದು. ಆಧುನಿಕ ತಂತ್ರಜ್ಞಾನದ ಮಷಿನ್‌ಗಳನ್ನು ಬಳಸಿಕೊಂಡು, ಬೇಡಿಕೆಗೆ ಅನುಗುಣವಾಗಿ ಇಲ್ಲಿಯೇ ಶೀಟ್ಸ್ ಗಳನ್ನು ಮಾಡಿಕೊಡಲಾಗುತ್ತದೆ. 9481871454, 7338328454

Exit mobile version