ಅಂಕೋಲಾ : ತಾಲೂಕಿನ ಹಲವೆಡೆ ನಡೆಯುತ್ತಿತ್ತೆನ್ನಲಾದ ಅಕ್ರಮ ಮರಳುಗಾರಿಕೆ, ಸಂಬಂಧಿಸಿದ ಇಲಾಖೆಗಳ ಬಿಗು ಕ್ರಮಗಳಿಂದ ಬಹುತೇಕ ಸ್ತಬ್ಧವಾದಂತಿದೆ. ಆದರೂ ಕೆಲವರು ಅಂಕೋಲಾ ತಾಲೂಕಿನಿಂದ ಗಡಿಯಂಚಿನ ಇತರೆ ತಾಲೂಕುಗಳಿಗೆ ಅಕ್ರಮವಾಗಿ ಮರಳು ಸಾಗಿಸುತ್ತ ತಮ್ಮ ಅಡ್ಡಕಸುಬು ಮುಂದುವರೆಸಿದಂತಿದ್ದು, ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ತುಂಬಿ ಸಾಗಾಟ ಮಾಡುತ್ತಿದ್ದ 4 ವಾಹನಗಳನ್ನು ಮಾಲು ಸಮೇತ ವಶಕ್ಕೆ ಪಡೆದಿರುವ ಅಂಕೋಲಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ತಾಲೂಕಿನ ಹಿಲ್ಲೂರ – ಹೊಸಕಂಬಿ ಮತ್ತಿತರೆಡೆ ಕೆಲ ವಾಹನಗಳಲ್ಲಿ ಅಕ್ರಮವಾಗಿ ರೇತಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಸಿ.ಪಿ.ಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಸೋಮವಾರ ದಾಳಿ ನಡೆಸಿದ ಪಿ.ಎಸ್.ಐ ಪ್ರವೀಣಕುಮಾರ ನೇತೃತ್ವದ ತಂಡ, ಅಕ್ರಮವಾಗಿ ರೇತಿ ಸಾಗಿಸುತ್ತಿದ್ದ ಎರಡು ಟಿಪ್ಟರ್ ಲಾರಿಗಳು , ಎರಡು ಲಘು ವಾಹನಗಳು ಸೇರಿ ಒಟ್ಟೂ 4 ವಾಹನಗಳನ್ನು ವಶಪಡಿಸಿಕೊಂಡು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರೊಬೆಶನರಿ ಪಿ.ಎಸ್.ಐ ಮುಶಾಹಿದ ಅಹಮದ್ ಸಿಬ್ಬಂದಿಗಳಾದ ಆಸಿಫ ಕುಂಕೂರ, ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ, ಮತ್ತು ಭಗವಾನ ಗಾಂವಕರ, ಚಾಲಕ ಜಗದೀಶ ನಾಯ್ಕ ಪಾಲ್ಗೊಂಡಿದ್ದರು. ಆಗಾಗ ಸುರಿವ ಮಳೆ,ದುರ್ಗಮ ಪ್ರದೇಶಗಳಲ್ಲಿ ರಾತ್ರಿ ವೇಳೆಯ ಕಾರ್ಯಾಚರಣೆಗೆ ಕೊಂಚ ತೊಡಕಾಯಿತು ಎನ್ನಲಾಗಿದ್ದು, ಪರಿಸ್ಥಿತಿಯ ಲಾಭ ಪಡೆದ ಕೆಲ ಅಕ್ರಮ ದಂಧೆಕೋರರು ಸ್ಥಳದಿಂದ ಕಾಲ್ಕಿತ್ತು ಪರಾರಿಯಾದರೆ, ಅಕ್ರಮ ಮರಳು ಸಾಗಾಟದಲ್ಲಿ ತೊಡಗಿಕೊಂಡಿದ್ದವೆನ್ನಲಾದ ಇತರೆ 4-5 ವಾಹನಗಳು ಅನ್ಯ ಮಾರ್ಗದ ಮೂಲಕ ಸಂಚರಿಸಿ ಪೊಲೀಸ್ ಕಣ್ಣುಗಳಿಂದ ತಪ್ಪಿಸಿಕೊಂಡವು ಎನ್ನಲಾಗಿದೆ. ಈ ಅಕ್ರಮ ದಂಧೆಯ ಜಾಲ ಭೇದಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸ್ ದಾಳಿಯ ವೇಳೆ ಮಾಲು ಸಮೇತ ವಶಪಡಿಸಿಕೊಂಡ ವಾಹನಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಈ ಪ್ರಕರಣದ ಕುರಿತಂತೆ ದಂಡ ವಸೂಲಿ ಮತ್ತಿತರ ಇಲಾಖೆ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537