Focus News
Trending

ತಂಬಾಕು ಅರಿವು ಕಾರ್ಯಕ್ರಮ: ತಂಬಾಕು ಸೇವನೆಯ ದುಷ್ಪರಿಣಾಮಗಳು ಎಂಬ ವಿಷಯದ ಕುರಿತು ಉಪನ್ಯಾಸ

ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ “ಶಾಲಾ ತಂಬಾಕು ರಹಿತ ಸಮಿತಿ” “ಇಕೋ ಕ್ಲಬ್” ಹಾಗೂ “ವಿಜ್ಞಾನ ಸಂಘದ” ಅಡಿಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಉಪನ್ಯಾಸಕರಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಿ.ಎಂ ನದಾಫೆ ಜಿಲ್ಲಾ ತಂಬಾಕು ನಿಯಂತ್ರಣಕೋಶಿ ಅವರು ಮಾತನಾಡಿ ತಂಬಾಕನ್ನು 6 ನೇ ಶತಮಾನದಲ್ಲಿ ಭಾರತದಲ್ಲಿ ಬೆಳೆಸಿದವರು ಬ್ರಿಟೀಷರು ಅದನ್ನು ಸೇವಿಸುತ್ತಿರುವವರು ಭಾರತೀಯರು ಆದ್ದರಿಂದ ಅದರ ಸೇವನೆಯ ಪರಿಣಾಮ ಎದುರಿಸುತ್ತಿರುವವರು ನಾವು ಎಂದು ಹೇಳಿದರು.

ತಂಬಾಕಿನಲ್ಲಿರುವ ರಾಸಾಯನಿಕ ಅಂಶಗಳು ಹಾಗೂ ಅವುಗಳ ಪರಿಣಾಮಗಳ ಕುರಿತು ತಿಳಿಸಿದರು ಹಾಗೂ ತಂಬಾಕಿನ ಸೇವನೆಯಿಂದ ಉಂಟಾಗುವ ಪರಿಣಾಮವನ್ನು ಪ್ರೊಜೆಕ್ಟರ ಮುಖಾಂತರ ಚಿತ್ರ ಸಹಿತವಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕೋಟ್ಪಾ ಕಾಯಿದೆಯ ಅಡಿಯಲ್ಲಿ ಬರುವ ನಿಯಮಗಳನ್ನು ತಿಳಿಸಿ ಹೇಳಿದರು. ಅತ್ಯಂತ ಸರಳ ಭಾಷೆಯ ಮೂಲಕ ವಿದ್ಯಾರ್ಥಿಗಳ ಮನಃ ಮುಟ್ಟುವಂತೆ ಮಾತನಾಡಿದರು. ನಂತರ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಲ್ ಎಂ ಹೆಗಡೆಯವರು ಮಾತನಾಡಿ ಗೆಳೆತನದ ಮೂಲಕವೇ ಚಟಗಳೂ ಸಹ ಬೆಳೆಯುತ್ತದೆ. ಅದು ಬಹುಬೇಗ ಚಟ್ಟದ ತನಕ ಕೊಂಡೊಯ್ಯುತ್ತದೆ. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತಂಬಾಕಿನoತಹ ಮಾದಕ ವಸ್ತುಗಳು ಮಾರಕವಾಗಿದೆ. ಆರ್ಥಿಕ ಹಿನ್ನಲೆಯಲ್ಲಿ ಅದನ್ನು ಉತ್ಪಾದಿಸಿದರೂ ಸಹ ವಿವೇಚನೆಯಲ್ಲಿ ಸಮಾಜದ ಜನರು ಅದರಿಂದ ದೂರವಿರಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ನೀಡಿದರು.

ಕುಮಾರಿ ದಿಶಾ ಶ್ಯಾನಭಾಗ ಸಂಗಡಿಗರು ಸ್ವಾಗತಗೀತೆ ಪ್ರಸ್ತುತ ಪಡಿಸಿದರು. ಶ್ರೀ ಸುಬ್ರಹ್ಮಣ್ಯಭಟ್ಟ ಇವರು ವಂದಿಸಿದರು. ಶ್ರೀ ಶ್ರೀಕಾಂತ ಹಿಟ್ನಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Back to top button