Important
Trending

ದಿ.ಮೋಹನ ಕೆ.ಶೆಟ್ಟಿ ಯವರ 68 ನೇ ಜನ್ಮದಿನ

ವೃದ್ಧಾಶ್ರಮಕ್ಕೆ ದಿನಸಿ ಸಾಮಗ್ರಿ ವಿತರಣೆ
ಮೋಹನ ಕೆ.ಟ್ರಸ್ಟ್ ವತಿಯಿಂದ ಟ್ರಸ್ಟ್ ನಿಂದ ಹಂಚಿಕೆ

ಕುಮಟಾ: ಕ್ಷೇತ್ರದ ಮಾಜಿ ಶಾಸಕರು, ಅಭಿವೃದ್ಧಿ ಹರಿಕಾರರು, ದೀನದಲಿತರ ಹಿತೈಷಿಗಳು, ಉದಾರ ದಾನಿಗಳು ಆಗಿದ್ದ ದಿ.ಮೋಹನ ಕೆ.ಶೆಟ್ಟಿ ಯವರ 68 ನೇ ಜನ್ಮದಿನದ ಪ್ರಯುಕ್ತ ಕುಮಟಾದ ಜಾನಕಿರಾಮ ವೃದ್ಧಾಶ್ರಮ ಕ್ಕೆ ದಿನಸಿ ಸಾಮಗ್ರಿಗಳನ್ನು ಹಾಗೂ ದಿನಬಳಕೆಯ ವಸ್ತುಗಳನ್ನು ದಿ. ಮೋಹನ ಕೆ.ಟ್ರಸ್ಟ್ ವತಿಯಿಂದ ಟ್ರಸ್ಟ್ ನ ಉಪಾಧ್ಯಕ್ಷರಾದ ರವಿಕುಮಾರ್ ಎಂ. ಶೆಟ್ಟಿಯವರು ವಿತರಿಸಿದರು. ಮೋಹನ್ ಕೆ. ಶೆಟ್ಟಿಯವರ ನಿಧನದ ನಂತರ ಅವರ ಸೇವಾಭಾವನೆಯನ್ನು ಮುಂದುವರೆಸುವ ಉದ್ದೇಶದಿಂದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ರವಿಕುಮಾರ್ ಎಂ. ಶೆಟ್ಟಿಯವರು ಹಾಗೂ ದಿಲೀಪ್ ಎಂ.ಶೆಟ್ಟಿಯವರು ದಿ.ಮೋಹನ್ ಕೆ. ಶೆಟ್ಟಿ ಟ್ರಸ್ಟ್ ಎಂಬ ಟ್ರಸ್ಟ್ ರಚನೆ ಮಾಡಿ, ಅಲ್ಲಿಂದ ಇಲ್ಲಿಯವರೆಗೂ ದೀನದಲಿತರ, ಬಡವರ, ವಿದ್ಯಾರ್ಥಿಗಳ, ರೋಗಿಗಳ, ಕಷ್ಟ ಎಂದು ಬಂದವರ ಸೇವೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಕೊರೋನಾ ವಾರಿಯರ್ಸ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರಿಗೆ, ಪೌರಕಾರ್ಮಿಕರಿಗೆ, ಕೊರೋನಾದಿಂದ ತೊಂದರೆಗೊಳಗಾದ ಟೆಂಪೋ ಚಾಲಕ-ಮಾಲಕ-ನಿರ್ವಾಹಕರು, ಟ್ಯಾಕ್ಸಿ ಚಾಲಕ ಮಾಲಕರಿಗೆ, ಪೇಪರ್ ಹಂಚುವವರಿಗೆ ಹಾಗೂ ಇನ್ನೂ ಅನೇಕರಿಗೆ ಟ್ರಸ್ಟ್ ಮೂಲಕ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ವಿ.ಎಲ್.ನಾಯ್ಕ, ರವಿ ಗೌಡ, ಮನೋಜ ನಾಯಕ , ನಿತ್ಯಾನಂದ ನಾಯ್ಕ್ , ಸಂದೀಪ ವೆಂಕಟೇಕರ್ ಹಾಜರಿದ್ದರು..
ವಿಸ್ಮಯ ನ್ಯೂಸ್, ಕುಮಟಾ

[sliders_pack id=”1487″]

Back to top button