Big News
Trending

ದೇಶಪ್ರೇಮ ಮೆರೆದ ಅಧಿಕಾರಿ: ಸ್ವಇಚ್ಛೆಯಿಂದ ಕರೊನಾ ವಾರಿಯರ್ಸ್ ಆಗಿ ಸೇವೆ

ಲಾಕ್‌ಡೌನ್ ಅವಧಿಯಲ್ಲಿ ತನ್ನ ವೃತ್ತಿ ಸೇವೆಯ ಜೊತೆ ಜೊತೆಯಲ್ಲಿಯೇ ಹೆಚ್ಚುವರಿಯಾಗಿ ಕೊರೋನಾ ವಾರಿಯರ್ಸ ಆಗಿ ಸ್ವಯಂ ಪ್ರೇರಣೆಯಿಂದ ಕೆಲಸ ನಿರ್ವಹಿಸುವ ಮೂಲಕ 2016ರ ಬ್ಯಾಚಿನ ಭಾರತೀಯ ರೆವೆನ್ಯೂ ಸರ್ವಿಸ್‌ನ ಅಧಿಕಾರಿಯೊರ್ವರು ತಮ್ಮ ದೇಶ ಪ್ರೇಮ ಮೆರೆದು ಮಾದರಿಯಾಗಿದ್ದಾರೆ. ಹಾವೆರಿ ಚಿತ್ರದುರ್ಗ ಹಾಗೂ ದಾವಣಗೆರೆ ಕೇಂದ್ರ ಜಿ.ಎಸ್.ಟಿ ವಿಭಾಗಗಳ ಮುಖ್ಯಸ್ಥರಾಗಿರುವ ಉತ್ತರಕನ್ನಡ ಮೂಲದ ಅಂಕೋಲಾ ತಾಲೂಕಿನ ಸುರ್ವೇ ಗ್ರಾಮದ ರಮೇಶ ಮತ್ತು ಲಕ್ಷ್ಮೀ ನಾಯಕ ಶಿಕ್ಷಕ ದಂಪತಿಗಳ ಪುತ್ರನಾಗಿರುವ ಪ್ರಮೋದ ನಾಯಕ, ತನ್ನ ಕರ್ತವ್ಯ ಪ್ರಜ್ಞೆ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗುತ್ತಿದ್ದಾರೆ.
ದಾವಣಗೆರೆಯಲ್ಲಿ ತಾನು ಕರ್ತವ್ಯ ನಿರ್ವಹಿಸುವ ವೇಳೆ, ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವೈಹಿವಾಟು ಸಂಪೂರ್ಣ ಬಂದ್ ಆಗಿದ್ದರಿಂದ ತನ್ನ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಕಡಿಮೆ ಇರುವುದನ್ನು ಮನಗಂಡು, ಅತಿ ಕಡಿಮೆ ಅವಧಿಯಲ್ಲಿ ಲ್ಯಾಪ್‌ಟಾಪ್ ಮೂಲಕವೇ ಆ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದ ಪ್ರಮೋದ ನಾಯಕ ದೇಶದ ಸಂಕಷ್ಟದ ಸಮಯದಲ್ಲಿ ತಾನು ಹೆಚ್ಚುವರಿ ಸೇವೆ ನೀಡಲು ಸಿದ್ಧನಿದ್ದೇನೆ ಎಂದು ಅಲ್ಲಿಯ ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಗ, ಜಿಲ್ಲಾಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಲಿ ಎಂದು ಪ್ರಮೋದ ನಾಯ್ಕರ ಸ್ವಯಂ ಇಚ್ಛೆಯಂತೆ ಕೊರೋನಾ ವಾರಿಯರ್ಸ ಸೇವೆಗೆ ಬಳಸಿಕೊಂಡರು.
ಈ ಮೊದಲು ಹಸಿರು ವಲಯದಲ್ಲಿಯೇ ಇದ್ದ ದಾವಣಗೆರೆಯಲ್ಲಿ ಒಮ್ಮೆಲೆಯೇ 22 ಕೊರೋನಾ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದಲ್ಲದೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠರು, ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು,ಸಿಬ್ಬಂಧಿಗಳು ಸೇರಿದಂತೆ ಇತರೆ ಎಲ್ಲಾ ಇಲಾಖೆಗಳ ಬಹುತೇಕ ಅಧಿಕಾರಿ ಮತ್ತು ಸಿಬ್ಬಂದಿಗಳ ಜಾಗೃತ ತಂಡವು ದಿನದ 24 ಗಂಟೆಯು ಕೊರೋನಾ ವಿರುದ್ಧ ಸೆಣಸಲು ಟೊಂಕ ಕಟ್ಟಿ ನಿಂತಿತ್ತು. ಜಿಲ್ಲಾಡಳಿತದ ಜೊತೆ ತನ್ನ ಅಳಿಲು ಸೇವೆ ಸಲ್ಲಿಸಲು ಮುಂದಾದ ಪ್ರಮೋದ ನಾಯಕ ಅಗತ್ಯ ವಸ್ತು ಮತ್ತು ಮಾನವ ಸಂಪನ್ಮೂಲ ಪೂರೈಕೆಯ ನೊಡೆಲ್ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದರು.
ವೈದ್ಯಕೀಯ ಕಾಲೇಜುಗಳ ಸಿಬ್ಬಂಧಿಯನ್ನು ಆಸ್ಪತ್ರೆಗೆ ನಿಯೋಜಿಸಲು ಸಮನ್ವಯತೆ ಸಾಧಿಸಿ ವೈಧಕೀಯ ಕಾಲೇಜು ಮತ್ತು ನರ್ಸಿಂಗ್ ಹೋಮ್ ಅಸೋಶಿಸ್‌ನ ಪ್ರಾಶುಂಪಾಲರು ಮತ್ತಿತರರ ಸಹಕಾರದಲ್ಲಿ ಜಿಲ್ಲಾಡಳಿತಕ್ಕೆ ಬೆಂಬಲ ಸಿಗಲು ಮುಖ್ಯ ಪಾತ್ರ ವಹಿಸಿದರು. ಸಿಲ್‌ಡೌನ್ ಪ್ರದೇಶ ಕ್ವಾರೆಂಟೈನ್ ಕೇಂದ್ರ ಆಸ್ಪತ್ರೆ ಮತ್ತಿತರೆಡೆ ತುರ್ತು ಸೇವೆ ಮತ್ತು ಅಗತ್ಯತೆಯನ್ನು ಪೂರೈಸಲು ಸಂವಹನ ಮಾಡಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪ್ರಮೋದ ನಾಯಕ ಕೊರೋನಾ ವಾರಿಯರ್ಸನ ನಿಜ ಯೋಧನಾಗಿ ಗುರುತಿಸಿಕೊಂಡರು. ಈ ಮೊದಲೇ ನಿಶ್ಚಯವಾಗಿದ್ದ ತಮ್ಮ ವಿವಾಹವನ್ನು ಮುಂದುಡಿ ತನ್ನ ಕರ್ತವ್ಯ ಸೇವೆಯಲ್ಲಿಯೇ ಮುಂದುವರೆಯುವ ಮೂಲಕ ತಾಯ್ನಾಡಿಗರ ಆರೋಗ್ಯ ರಕ್ಷಣೆಗೆ ಮುಂದಾದ ಈ ಅಧಿಕಾರಿಯನ್ನು ಶ್ಲಾಘಿಸಲೇ ಬೇಕಲ್ಲವೇ?

ಸರ್ಕಾರ ಜಿಲ್ಲಾಡಳಿತ, ಎಷ್ಠೇ ಪ್ರಯತ್ನ ಪಟ್ಟರೂ ಜನ ಸಮುದಾಯ ಕೈ ಜೋಡಿಸದೇ ಯಶಸ್ವಿಯಾಗಲು ಸಾಧ್ಯವಿಲ್ಲ. ಲಾಕ್‌ಡೌನ್ ಮುಗಿದು ಆರ್ಥಿಕ ಚಟುವಟಿಕೆ ಆರಂಭಗೊಂಡಿದೆ. ಕೊರೋನಾ ಎಂದರೆ ಏನು ಎಂಬುವುದು ಗೊತ್ತಾಗಿದೆ ಹಾಗಾಗಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಬೇಕು ಜನರಲ್ಲಿ ಅರಿವು ಮೂಡಿದರೆ ಎಂತಾ ಸವಾಲನ್ನಾದರು ಎದುರಿಸಬಹುದು ಮಾಸ್ಕನ್ನು ಕಡ್ಡಾಯವಾಗಿ ಧರಿಸಲೇ ಬೇಕು ಹಲವು ಮುಂಜಾಗೃತೆ ಮತ್ತು ಸ್ವಚ್ಛತೆಗೆ ಗಮನ ನೀಡಿ ಸೋಂಕು ಸಮುದಾಯಕ್ಕೆ ವ್ಯಾಪಿಸದಂತೆ ಸಾಮಾಜಿಕ ಪ್ರಜ್ಞೆ ಮೇರೆಯಬೇಕು. ಎಂಬುವುದು ಅಧಿಕಾರಿಯ ಮನದಾಳದ ಮಾತುಗಳಾಗಿವೆ.

-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
[sliders_pack id=”1487″]

Back to top button