ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಕನಕದಾಸ ಜಯಂತಿ ಮತ್ತು ಮಕ್ಕಳ ದಿನಾಚರಣೆ ಆಚರಣೆ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ಕುಮಟಾದಲ್ಲಿ ದಿನಾಂಕ ಇಂದು ಕನಕದಾಸ ಜಯಂತಿ ಮತ್ತು ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಲೀನಾ ಗೊನೆಹಳ್ಳಿಯವರು ಮಾತನಾಡಿ ವಿದ್ಯಾರ್ಥಿಗಳು ಕನಕದಾಸರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ಸಂಯಮದ ಪಾಲನೆಗೂ ಮಹತ್ವ ಕೊಡಬೇಕು ಎಂದರು.

ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ಪೂಜಾ ಭಟ್‌ ಪ್ರಾರ್ಥಿಸಿದರು. ಶ್ರೀ ಸಂದೀಪ ನಾಯ್ಕ ಸ್ವಾಗತಿಸಿದರು. ಶ್ರೀ ಬಾಲಕೃಷ್ಣ ನಾಯಕ ಕನಕದಾಸರು ಜೀವನ, ಅವರ ತತ್ವ-ಸಿದ್ಧಾಂತಗಳು, ಅವರ ಕೃತಿಗಳ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ವಿದೂಷಿ ರಂಜನಾ ಆಚಾರ್ಯರವರು ಕನಕದಾಸರ ಭಜನೆಯನ್ನು ಹಾಡಿದರು.

ಶ್ರೀಮತಿ ಅನಿತಾ ಬಾಳಗಿಯವರು ಮಕ್ಕಳಿಗೆ ಸ್ಪೂರ್ತಿ ತುಂಬುವ ಹಾಡನ್ನು ಹಾಡಿದರು. ಮಾಝ್ನಿಯಾ ರವರು ಮಕ್ಕಳ ದಿನಾಚರಣೆ ಕುರಿತು ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿಶೇಷ ಬಹುಮಾನವನ್ನು ನೀಡಿ ಪೂಜ್ಯರು ಆಶೀರ್ವದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಹಾಲಕ್ಷ್ಮೀಯವರು ನೆರವೇರಿಸಿಕೊಟ್ಟರು. ತನುಜಾ ಎಸ್.‌ ವಿ ವಂದನಾರ್ಪಣೆಯನ್ನು ಮಾಡಿದರು

Exit mobile version