ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ತರಕಾರಿ ತುಂಬಿದ್ದ ಲಾರಿಯೊಂದು ಹೆದ್ದಾರಿ ಪಕ್ಕದ ಅರಣ್ಯದಲ್ಲಿ ಪಲ್ಟಿಯಾದ ಘಟನೆ ಜಮಗುಳಿ-ಹಳಿಯಾಳ ಕ್ರಾಸ್ ಮಧ್ಯದ ಹೆದ್ದಾರಿಯಲ್ಲಿ ನಡೆದಿದೆ. ಇನ್ನೂ ನೊಂದಣಿಯಾಗದ ನೂತನ ಲಾರಿಯನ್ನು ಮಹಾರಾಷ್ಟ್ರದಿಂದ ಕೇರಳಕ್ಕೆ ಡೆಲಿವರಿ ನೀಡಲು ಕೊಂಡೊಯ್ಯುವಾಗ ಚಾಲಕ ಖಾಲಿ ಹೋಗುವ ಬದಲು ತರಕಾರಿ ಲೋಡ್ ಮಾಡಿಕೊಂಡು ಹೋಗಿದ್ದ.
ಯಲ್ಲಾಪುರದಲ್ಲಿ ಹಾದುಹೋದ ಬಳ್ಳಾರಿ, ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಸಾಗುವಾಗ ಮಳೆಯ ತೇವಾಂಶ ಇದ್ದಕಾರಣ ಲಾರಿಯ ಚಕ್ರ ರಸ್ತೆ ಬದಿಗೆ ಇಳಿದ ಪರಿಣಾಮ ಚಾಲಕನಿಗೆ ನಿಯಂತ್ರನಕ್ಕೆ ಸಿಗದೆ ಪಕ್ಕದ ಅರಣ್ಯಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕನಿಗೆ ಹಾಗೂ ಸಹಾಯಕನಿಗೆ ಯಾವುದೇ ಗಾಯಗಳಾಗಿಲ್ಲ. ನೂತನ ಲಾರಿ ಜಖಂ ಆಗಿದ್ದು, ಲಾರಿಯಲ್ಲಿ ತುಂಬಿದ್ದ ತರಕಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅರಣ್ಯದಲ್ಲಿ ಬಿದ್ದ ತರಕಾರಿಗಳು ಮಂಗಗಳು, ದನಕರುಗಳು ಹಾಗೂ ಜನರ ಪಾಲಾಗಿವೆ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಕಾರವಾರ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537