ಅಂಕೋಲಾ: ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಗೋವಾ ಸರಾಯಿ ಬಾಟಲಿಗಳನ್ನು ಅಂಕೋಲಾ ತಾಲೂಕಿನ ಅಬಕಾರಿ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ರಾತ್ರಿ ಬೆಲೇಕೇರಿಯ ಬಂಗ್ಲೆವಾಡಾದಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಬೆಲೇಕೇರಿಯ ಸಂದೇಶ ನಾರಾಯಣ ಬಾನಾವಳಿಕರ ಬಂಧಿತ ಆರೋಪಿಯಾಗಿದ್ದು ಇವರ ಮನೆಯಲ್ಲಿ ನಾಲ್ಕು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟ ಸುಮಾರು 12 ಸಾವಿರ ರೂಪಾಯಿ ಮೌಲ್ಯದ ಗೋವಾ ರಾಜ್ಯದಲ್ಲಿ ತಯಾರಾದ ಲೈಟ್ ಹಾರ್ಸ್ ಪ್ರೀಮಿಯಮ್ ಬ್ಲೆಂಡೆಡ್ ಮಾಲ್ಟ್ ವಿಸ್ಕಿ ಹೆಸರಿನ 180 ಎಂ.ಎಲ್ ನ 451 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಂಕೋಲಾ ಅಬಕಾರಿ ಇಲಾಖೆಯ ನಿರೀಕ್ಷಕ ರಾಹುಲ್ ನಾಯಕ ಅವರ ಮಾರ್ಗದರ್ಶನ, ಉಪ ನಿರೀಕ್ಷಕಿ ಪ್ರೀತಿ ರಾಥೋಡ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಎಚ್.ಕೆ.ಖಾನ್, ರಂಜನಾ ನಾಯ್ಕ, ಸುರೇಶ ಹಾರುಗೊಪ್ಪ, ಶ್ರೀಶೈಲ ಹಡಪದ, ಗಿರೀಶ್ ಅರವಾಳೆ, ಬಸಪ್ಪ ಅಂಗಡಿ, ಈರಣ್ಣ ಕುರುಬೇಟ ವಾಹನ ಚಾಲಕ ವಿನಾಯಕ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ