Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ ಏರಿಕೆ‌ ಕಂಡ ಕೋವಿಡ್: ಇಂದಿನ ಕೋವಿಡ್ ವಿವರ: ಎಲ್ಲೆಲ್ಲಿ ಎಷ್ಟು‌ ಕೇಸ್ ದಾಖಲಾಗಿದೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಶೂನ್ಯಕ್ಕೆ ಇಳಿದಿದ್ದ ಕೋವಿಡ್ ಕೇಸ್ ಮತ್ತೆ ದಿಢೀರ್ ಆಗಿ ಏರಿಕೆ ಕಾಣತೊಡಗಿದೆ.ಜಿಲ್ಲೆಯಲ್ಲಿ ಇಂದು 21 ಕೋವಿಡ್ ಕೇಸ್ ಪತ್ತೆಯಾಗಿದೆ. ಇದೇ ವೇಳೆ, 7 ಜನರು ಗುಣಮುಖರಾಗಿದ್ದಾರೆ.

ಕಾರವಾರ 6, ಕುಮಟಾ 2, ಶಿರಸಿ 1, ಸಿದ್ದಾಪುರ 5,ಮುಂಡಗೋಡ 1, ಹಳಿಯಾಲದಲ್ಲಿ 6 ಕೇಸ್ ದೃಢಪಟ್ಟಿದೆ.ಜಿಲ್ಲೆಯಲ್ಲಿ ಈವರೆಗೆ 56, 203 ಕೊರೊನಾ ಕೇಸ್‌ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 789 ಜನರು ಮೃತಪಟ್ಟಿದ್ದು ಈವರೆಗೆ 43 ಪ್ರಕರಣ ಸಕ್ರೀಯವಾಗಿದೆ. 36 ಸೋಂಕಿತರು ಹೋಮ್ ಐಸೊಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಜನರುಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button