ವಿಧಾನಪರಿಷತ್ ಚುನಾವಣೆ: ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರಿಂದ ವಿವಿದೆಡೆ ಪ್ರಚಾರ

ಸಿದ್ದಾಪುರ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಭೀಮಣ್ಣ ನಾಯ್ಕ ರವರ ಪರವಾಗಿ ಸಿದ್ದಾಪುರ ಬಾಲಭವನದಲ್ಲಿ ಗುರುವಾರ ಮಾಜಿ ಸಚಿವರು ಹಾಗೂ ಹಾಲಿ ಹಳಿಯಾಳ ಶಾಸಕರಾದ ಆರ್.ವ್ಹಿ. ದೇಶಪಾಂಡೆ ಯವರು ,ಪ್ರಚಾರ ಸಭೆ ನಡೆಸಿದರು. ನಂತರ ದೇಶಪಾಂಡೆಯವರು ಮಾತನಾಡಿ ಮಹಿಳೆಯರಿಗೆ ಎಸ್ಸಿಎಸ್ಟಿ ಜನಾಂಗದವರಿಗೆ ಹಿಂದುಳಿದವರ್ಗದವರಿಗೆ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಮೀಸಲಾತಿ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಚುನಾವಣೆ ಯನ್ನು ಹಗುರವಾಗಿ ನೋಡಬೇಡಿ. ಐದು ಚುನಾವಣೆಯಲ್ಲಿ ಗೆದಿದ್ದು, ಆರನೇ ಚುನಾವಣೆಯಲ್ಲೂ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಬೇಕು. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಪಂಚಾಯ್ತಿ ವ್ಯವಸ್ಥೆಗೆ ಶಕ್ತಿ ತುಂಬಬೇಕು.

ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ ಚುನಾಯಿತ ಪ್ರತಿನಿಧಿಗಳು ತಮ್ಮ ವಾರ್ಡಿಗೆ ಅನುದಾನವಿಲ್ಲದೇ ಬೇಸತ್ತು ಹೋಗಿದ್ದಾರೆ. ಕೊರೊನಾದ ವೇಳೆ ಆಡಳಿತ ಪಕ್ಷ ಮಾಡದ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಮಾಡಿದೆ. ನಿಮ್ಮಗಳ ಪ್ರತಿನಿಧಿಯಾಗಿ ಸ್ಪರ್ಧಿಸಿರುವ ನನಗೆ ತಮ್ಮ ಅಮೂಲ್ಯ ಮತ ನೀಡಿ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು. ತಾವೆಲ್ಲಾ ಶಕ್ತಿಮೀರಿ ಕೆಲಸ ಮಾಡಿ ಗೆಲ್ಲಿಸುವ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಲು ನಾಂದಿ ಹಾಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಈಗಾಗಲೇ 23 ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಯಲ್ಲಿ ಮತಯಾಚನೆ ಮಾಡಿದ್ದೇವೆ. ಪಂಚಾಯ್ತಿಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ 114 ಸದಸ್ಯರಿದ್ದು, ಭೀಮಣ್ಣ ನಾಯ್ಕರಿಗೆ ಅತಿ ಹೆಚ್ಚಿನ ಮತ ಕೊಡಿಸಲಿದ್ದೇವೆ. ಸಿದ್ದಾಪುರ ತಾಲೂಕಿನಲ್ಲಿ 170-180 ಮತ ಕೊಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಗ್ರಾಮ ಪಂಚಾಯ್ತಿಗೆ ಅನುದಾನ ಸಂಪೂರ್ಣ ಕಡಿತ ಮಾಡಿದ್ದು, ಕಾಂಗ್ರೆಸ್ ಗೆ ವರವಾಗಲಿದೆ. ತಾಲೂಕಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು ಭೀಮಣ್ಣ ನಾಯ್ಕರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ನ ಪ್ರಮುಖರಾದ ನಿವೇದಿತಾ ಆಳ್ವ , ಶಿರಸಿ ಸಿದ್ದಾಪುರ ಕ್ಷೇತ್ರದ ಉಸ್ತುವಾರಿ ಶ್ರೀಮತಿ ಸುಷ್ಮಾ ರಾಜ್ ಗೋಪಾಲ , ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ನಾಗರಾಜ ನಾರ್ವೆಕರ್ , ಸಾಯಿ ಗಾಂವಕರ, ಎಸ್.ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಬಸವರಾಜ ದೊಡ್ಡಮನಿ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರುs

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version