ಶಿರಸಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಅಡ್ಡಗಟ್ಟಿ ವ್ಯಕ್ತಿಯೋರ್ವ ರೇತಿ ತನಗೆ ಕೊಡು ಎಂದು ಚಾಲಕನ ಹಲ್ಲು ಮುರಿದ ಘಟನೆ ಇಲ್ಲಿನ ಗಿಡಮಾವಿನಕಟ್ಟೆ ಬಳಿ ನಡೆದಿದೆ. ಮೈನುದ್ದೀನ್ ಬಾಬುಸಾಬ್ ಅತ್ತಾರ ಹಲ್ಲು ಮುರಿದ ಆರೋಪಿಯಾಗಿದ್ದಾನೆ. ಟಿಪ್ಪರ್ ಚಾಲಕ ಪರಮೇಶ್ವರ ಕೋಣನವರ್ ಅವರಲ್ಲಿ ತನಗೆ ಮರಳಿನ ಅಗತ್ಯತೆ ತುರ್ತಾಗಿ ಇದೆ. ತಕ್ಷಣವೇ ಟಿಪ್ಪರ್‌ನಲ್ಲಿರುವ ಮರಳು ಕೊಡು ಎಂದು ಆಗ್ರಹಿಸಿದ್ದಾನೆ.
ಟಿಪ್ಪರ್ ನಲ್ಲಿ ಬೇರೆಡೆ ಸಾಗಿಸುತ್ತಿದ್ದ ಮರಳನ್ನು ಅರ್ಜೆಂಟಾಗಿ ತನಗೆ ಬೇಕು. ಕೂಡಲೇ ಇಳಿಸು ಎಂದಿದ್ದಾನೆ. ಆದರೆ, ಟಿಪ್ಪರ್ ಚಾಲಕ ಮರಳು ನೀಡಲು ಒಪ್ಪದಿದ್ದಾಗ ಹಲ್ಲೆ ನಡೆಸಿ ಚಾಲಕನ ಹಲ್ಲು ಮುರಿದಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091