ಕುಮಟಾ: ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ವಿಶ್ಲೇಷಣೆ ಮತ್ತು ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ನಡೆಯಲಿದ್ದು, ನಮ್ಮ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆಸಕ್ತ ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಯಿಂದ ತಲಾ ಇಬ್ಬರು ಶಿಕ್ಷಕರು ಈ ಕಾರ್ಯಾಗಾರಕ್ಕೆ ಹಾಜರಾಗಬಹುದು.
ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಶಿವಮೊಗ್ಗದ ಪ್ರಾಂಶುಪಾಲರಾದ ಶ್ರೀ ಗುರುರಾಜರವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ|| ಹರಿಪ್ರಸಾದ ಜಿ. ವಿ, ಹಿರಿಯ ಉಪನ್ಯಾಸಕರು, ಡಯಟ್, ಶಿವಮೊಗ್ಗ ಮತ್ತು ಡಾ|| ಅಶೋಕ ಕಾಮತ್, ಪ್ರಾಂಶುಪಾಲರು, ಡಯಟ್, ಉಡುಪಿ ಆಗಮಿಸಲಿದ್ದಾರೆ.
ಮೊದಲ ಅವಧಿ – ಬೆಳಿಗ್ಗೆ 10:00ರಿಂದ 1:00 ರವರೆಗೆ ʼರಾಷ್ಟ್ರೀಯ ಶಿಕ್ಷಣ ನೀತಿಯ ರೂಪುರೇಷೆʼ ಹಾಗೂ ಎರಡನೇ ಅವಧಿಯಲ್ಲಿ – ಮಧ್ಯಾಹ್ನ2:00ರಿಂದ 4.00 ʼರಾಷ್ಟ್ರೀಯ ಶಿಕ್ಷಣ ನೀತಿ – ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನಾವುʼ ವಿಷಯದ ಬಗ್ಗೆ ವಿಶೇಷ ಕಾರ್ಯಾಗಾರ ನಡೆಲಿದೆ. ಆಸಕ್ತ ಶಿಕ್ಷಕರು ಈ ಕಾರ್ಯಾಗಾರಕ್ಕೆ ಆಗಮಿಸಿ ಇದರ ಸದುಪಯೋಗ ಪಡೆಯಬೇಕೆಂದು ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.
ವಿಸ್ಮಯ ನ್ಯೂಸ್ ಕುಮಟಾ