ಜಾನಪದ ಕಲಾ ತಂಡದಿಂದ ಏಡ್ಸ್ ಜನ ಜಾಗೃತಿ ಕಾರ್ಯಕ್ರಮ.

ಅಂಕೋಲಾ: ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಕಾರವಾರ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಂಕೋಲಾದ ವಿವಿಧ ಭಾಗಗಳಲ್ಲಿ HIV ಏಡ್ಸ್ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಜನರನ್ನು ತಲುಪಲು ಜಾನಪದ ಕಲೆಯ ಮಹತ್ವ ಅರಿತ ಆಡಳಿತ ವರ್ಗ,ಡೊಳ್ಳು ಕುಣಿತದ ಮೂಲಕ ಮಾರಕ ರೋಗ ಏಡ್ಸ್ ವಿರುದ್ಧ ಜನಜಾಗೃತಿಗೆ ಮುಂದಾಗಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗದ್ದಿಕರಿವಿನಕೊಪ್ಪ ಗ್ರಾಮದ ಶ್ರೀ ಬೀರ ಸಿದ್ದೇಶ್ವರ ಜಾನಪದ ಕಲಾ ಸಂಘದವರು ಅವರ್ಸಾ, ಬೆಲೇಕೇರಿ, ಅಂಕೋಲಾ ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಎದುರು, ಮೀನು ಮಾರುಕಟ್ಟೆ, ಬಸ್ ನಿಲ್ದಾಣ ಸೇರಿ ವಿವಿಧ ಪ್ರದೇಶಗಳಲ್ಲಿ ಕಲಾ ಪ್ರದರ್ಶನ ನೀಡಿ, ತಮ್ಮ ಜಾನಪದ ಡೊಳ್ಳುಕುಣಿತ ಹಾಗೂ ಜಾನಪದ ಗೀತೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ..

ಆಯಾ ಭಾಗದ ಆಶಾ ಕಾರ್ಯಕರ್ತೆಯರು, ಆರೊಗ್ಯ ಕಾರ್ಯಕರ್ತರು ಉಪಸ್ಥಿತರಿದ್ದು ಸಹಕರಿಸುತ್ತಿದ್ದಾರೆ. ತಾಲೂಕಿನ ತೆಂಕಣಕೆರಿ ಸೇರಿದಂತೆ ಇತರೆಡೆಯೂ ಜಾಗೃತಿ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಜಾನಪದ ಕಲಾ ತಂಡದ ಮುಖ್ಯಸ್ಥ ತಿಳಿಸಿದರು .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version