ಹೊನ್ನಾವರ: ಕಾರೊಂದು ನಿಯಂತ್ರಣ ತಪ್ಪಿ ಗುಡ್ಡಕ್ಕೆ ಬಡಿದು ಪಲ್ಟಿಯಾದ ಘಟನೆ ತಾಲೂಕಿನ ಸಿಂದಾಣಿಕೇರಿ ಬಳಿ ನಡೆದಿದೆ. ಮಂಕಿಯಿoದ ಹೊನ್ನಾವರ ಕಡೆ ಮೂವರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಿರೀಶ್ ಭಟ್, ಯಶೋಧಾ ಹೆಗಡೆ ಮತ್ತು ಕಾರು ಚಾಲಕ ಗಾಯಗೊಂಡವರು ಎಂದು ತಿಳಿದುಬಂದಿದೆ. ಹೊನ್ನಾವರಕಡೆಗೆ ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿದ್ದು, ಗುಡ್ಡಕ್ಕೆ ಡಿಕ್ಕಿಹೊಡೆದಿದೆ. ಈ ವೇಳೆ ಪಲ್ಟಿಯಾಗಿದ್ದು, ಮೂವರಿಗೆ ಗಾಯವಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೆ ವೇಳೆ, ಅಂಗಡಿ ಬಾಗಿಲು ಮರಿದು ಅಂಗಡಿಯನ್ನು ದೋಚಿದ ಘಟನೆ ಮಂಕಿಯ ನಿರಂಜನನಗರದಲ್ಲಿ ನಡೆದಿದೆ,. ಅಂಗಡಿಯ ಬಾಗಿಲು ಮುರಿದ ಕಳ್ಳರು ಲಾಕರ್‌ನಲ್ಲಿ ಇಟ್ಟಿದ್ದ 20 ಸಾವಿರ ಮೊತ್ತದ ಹಣ ದೋಚಿ ಪರಾರಿಯಾಗಿದ್ದು. ಬೆಳಿಗ್ಗೆ ಅಂಗಡಿ ಓಪನ್ ಮಾಡಿದಾಗ ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಸ್ಮಯ ನ್ಯೂಸ್
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091