ಕುಮಟಾ: ಖಾಸಗಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬoಧಿಸಿದ ಇತ್ತೀಚಿನ ಸುತ್ತೋಲೆಯು ಅವೈಜ್ಞಾನಿಕವಾಗಿದ್ದು ಸರ್ಕಾರಿ ಶಾಲೆಗಳಿಗೆ ಸಂಬoಧಿಸದೇ ಕೇವಲ ಖಾಸಗಿ ಶಾಲೆಗಳಿಗೆ ಅನ್ವಯಿಸುವಂತೆ ಮಾಡುತ್ತಿರುವುದು ಮಲತಾಯಿ ಧೋರಣೆಯಾಗಿದೆ ಎಂದು ಅಧ್ಯಕ್ಷ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಿ. ಬಂಟ ಸುದ್ಧಿ ಗೋಷ್ಠಿಯಲ್ಲಿ ತಿಳಿಸಿದರು.
‘ಎಲ್ಲಾ ಮೂಲಭೂತ ಸೌಕರ್ಯಗಳಿರುವ ಶಾಲೆಗಳಿಗೆ ಶಾಶ್ವತ ಮಾನ್ಯತೆಯನ್ನು ನೀಡಲು ಸರ್ಕಾರ ಆದೇಶ ಹೊರಡಿಸಬೇಕು. ಪದೇ ಪದೇ ಮಾನ್ಯತೆ ನವೀಕರಣಕ್ಕೊಳಪಡಿಸುವುದು ಅನುದಾನಿತ ಶಾಲೆಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮಾನ್ಯತೆ ನವೀಕರಣವನ್ನು ಸರಳೀಕರಣಗೊಳಿಸಿ ಸಾಮಾನ್ಯ ನಿಯಮಗಳನ್ನು ಅನುಕರಿಸುವ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಸಿಗುವಂತಾಗಬೇಕು. ಇತ್ತೀಚಿನ ಆಯುಕ್ತರು ಹೊರಡಿಸಿದ ಸುತ್ತೋಲೆ ಪ್ರಕಾರ ಡಿಸೆಂಬರ 28 ರ ವರೆಗೆ ಈ ಪ್ರಕ್ರಿಯೆ ಇದ್ದು ನವೀಕರಣಕ್ಕೆ ಸಂಬAಧಿಸಿದ ದಾಖಲೆ ಹಾಗು ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಎಸ್.ಎಸ್.ಎಲ್.ಸಿ ಪರೀಕ್ಷೆಯ ನೋಂದಾಯಿತ ವಿದ್ಯಾರ್ಥಿಗಳಿಗೆ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಜೋಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಇದಕ್ಕೆ ಶಿಕ್ಷಣ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿ ಮಾಡುವುದು ಸಮಂಜಸವಲ್ಲ’ ಎಂದು ಅವರು ಅಭಿಪ್ರಾಯ ಪಟ್ಟರು.
ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ಮಾತ್ರ ಲಭ್ಯವಾಗುತ್ತಿದ್ದು ಹುದ್ದೆ ಸಕಾಲದಲ್ಲಿ ತುಂಬಲು ಅನುಮತಿ ನೀಡುತ್ತಿಲ್ಲ. ಮಾನ್ಯತೆ ನವೀಕರಣಕ್ಕೆ ಸಂಬoಧಿಸಿದ ಇತ್ತೀಚಿನ ಆದೇಶದಲ್ಲಿ ಅನೇಕ ಜಠಿಲ ಮತ್ತು ತೊಡಕಿನಿಂದ ಕೂಡಿದ ಹಲವು ಅಂಶಗಳಿವೆ. ಈ ವರ್ಷದಿಂದ ಸಂಸ್ಕರಣಾ ಶುಲ್ಕ ರೂ. 1000 ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿನಂದಕ ಸುರಕ್ಷತಾ ಪ್ರಮಾಣ ಪತ್ರ ಮಾನ್ಯತೆ ನವೀಕರಿಸಲು ಕಡ್ಡಾಯ ಮಾಡಿರುವುದು ತೀರ ವೆಚ್ಚದಾಯಕವಾಗಿರುತ್ತದೆ. ಅಕ್ಷರ ಯಜ್ಞವನ್ನು ವಿದ್ಯಾರ್ಥಿಗಳಿಗೆ ದಾನ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಇದು ಆರ್ಥಿಕ ಸಾಮರ್ಥ್ಯಕ್ಕೆ ಮೀರಿದ್ದಾಗಿರುತ್ತದೆ. ಅಗ್ನಿ ನಂದಕ ಪ್ರಮಾಣ ಪತ್ರ ಪಡೆಯುವುದು ಸುಪ್ರೀಂ ಕೋರ್ಟ ಆದೇಶವಾಗಿದ್ದರೂ ಇದನ್ನು ಮಾನ್ಯತೆ ನವೀಕರಣಕ್ಕೆ ಜೋಡಿಸಿ ಷರತ್ತನ್ನು ಅನ್ವಯಿಸುವುದು ಸರಿಯಲ್ಲ ಎಂದು ಖಾರವಾಗಿ ಅಭಿಪ್ರಾಯ ಮಂಡಿಸಿದರು.
ಈ ಸಂದರ್ಭದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್. ಹೆಚ್. ಪಟಗಾರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಉಪಾಧ್ಯಕ್ಷ ಎಮ್. ಟಿ. ಗೌಡ, ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಮ್. ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಅನಿಲ ಮಡಿವಾಳ, ಕುಮಟಾ ಘಟಕದ ಅಧ್ಯಕ್ಷ ಅನಿಲ ರೋಡ್ರಿಗೀಸ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು