ಅಂಕೋಲಾ :ತಾಲೂಕಿನ ಹಟ್ಟಿಕೇರಿ ಮೂಲದ ನಿವೃತ್ತ ಕಮಾಂಡೋ ಸುಧೀರ ನಾಯ್ಕ , ಯುವ ಜನತೆ ದೇಶದ ಸೇನಾಪಡೆಯಲ್ಲಿ ಸೇರಿಕೊಳ್ಳಲು ಬೆಳಗಾವಿಯ ಭಾರತ್ ಅಕಾಡೆಮಿಯಿಂದ ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಉಚಿತ ತರಬೇತಿ ನೀಡುತ್ತಿದ್ದಾರೆ. ಭಾರತೀಯ ಸೇವೆಯಲ್ಲಿ ಪ್ಯಾರಾ ಕಮಾಂಡೋ ಆಗಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ಗಡಿಭಾಗಗಳಲ್ಲಿ17 ವರ್ಷ ಸೇವೆ ಸಲ್ಲಿಸಿರುವ ಸುಧೀರ ನಾಯ್ಕ ಅವರು ನಿವೃತ್ತಯ ನಂತರ ಬೆಳಗಾವಿಯಲ್ಲಿ ಭಾರತ್ ಅಕಾಡೆಮಿಯನ್ನು ಆರಂಭಿಸಿ ಅದರ ಮೂಲಕ ನೂರಾರು ಯುವಕರಿಗೆ ಸೇನಾ ಕಮಾಂಡೋ ತರಬೇತಿ ಮಾದರಿಯಲ್ಲಿ ತರಬೇತಿ ನೀಡುತ್ತಿದ್ದು ಅಂಕೋಲಾದಲ್ಲಿ 40 ಕ್ಕೂ ಹೆಚ್ಚು ಯುವಕರು ತರಬೇತಿ ಪಡೆಯುತ್ತಿದ್ದಾರೆ.
ಸೈನ್ಯ ಸೇರ ಬಯಸುವವರಿಗೆ ಕ್ರೀಡಾ ಪಟುಗಳಿಗೆ ಇಂಥ ತರಬೇತಿಯಿಂದ ಹೆಚ್ಚಿನ ಸಹಾಯವಾಗಲಿದೆ.ರಾಜ್ಯದ ಇತರೆಡೆ ಹೋಲಿಸಿದರೆಕರಾವಳಿ ಭಾಗದಲ್ಲಿ ಸೇನೆ ಸೇರುವವರ ಸಂಖ್ಯೆ ಕಡಿಮೆ ಇದೆ,ಸೇನೆಯನ್ನು ಸೇರಲುಬಯಸುವವರಿಗೆ ಆಯ್ಕೆಯ ಸಂದರ್ಭದಲ್ಲಿ ದೈಹಿಕ ಕ್ಷಮತೆಯ ಜೊತೆಯಲ್ಲಿ ಆಯ್ಕೆಗಾರರನ್ನು ಎದುರಿಸುವ ಮನೋಬಲ, ನೈಪುಣ್ಯತೆ ಅಗತ್ಯ ಸೂಕ್ತ ಮಾರ್ಗದರ್ಶನ ಇಲ್ಲದಿದ್ದರೆ ಎಲ್ಲಾ ದೈಹಿಕ ಸದೃಡತೆಯ ಅರ್ಹತೆ ಇದ್ದರೂ ಮನೋಬಲದ ಕೊರತೆಯಿಂದ ಆಯ್ಕೆ ಸಾಧ್ಯವಾಗುವುದಿಲ್ಲ. ತಾವು ನೀಡುವ ತರಬೇತಿಯಲ್ಲಿ ವಿಶೇಷ ಕೌಶಲ್ಯ, ದೈಹಿಕ ಕ್ಷಮತೆ ಹಾಗೂ ಮನೋಬಲ ಹೆಚ್ಚಿಸಲು ಒತ್ತು ನೀಡಲಾಗುತ್ತದೆ ಎಂದು ಸುಧೀರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಪ್ರಶಾಂತ ಮತ್ತು ಗಂಗಾಧರ ಗೌಡ ಎನ್ನುವವರನ್ನು ಅಂಕೋಲಾದ ಯುನಿಟ್ ಮುಂದಾಳತ್ವ ವಹಿಸಲು ಸುಧೀರ ನಾಯ್ಕ ಅವರು ಸಜ್ಜುಗೊಳಿಸಿದ್ದುತಾಲೂಕಿನ ಯುವಕರು ಸೂಕ್ತ ಮಾರ್ಗದರ್ಶನದೊಂದಿಗೆ ಸೈನ್ಯ ಸೇರಿ ದೇಶ ಮಾಡಬೇಕೆಂಬ ಆಶಯ ಹೊಂದಿದ್ದಾರೆ.ದೇಶ ರಕ್ಷಣೆಯ ಉದ್ದೇಶದಿಂದ ಸೇವಾ ನಿವೃತ್ತಿಯ ನಂತರವೂ ಸೇನೆಗೆ ಬಲ ತುಂಬುವಂತ ಯುವಕರನ್ನು ತಯಾರು ಮಾಡಲು ಶ್ರಮಿಸುತ್ತಿರುವ ಸುಧೀರ ನಾಯ್ಕ ಅವರ ಪ್ರಯತ್ನಕ್ಕೆ ಸಾರ್ವಜನಿಕರ ಪರವಾಗಿ ವಿಜಯಕುಮಾರ ನಾಯ್ಕ ಕನಸಿಗದ್ದೆ, ಬೊಮ್ಮಯ್ಯ ನಾಯ್ಕ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಯುವಜನತೆ ಹೆಚ್ಚು ಹೆಚ್ಚಾಗಿ ಉಚಿತ ತರಬೇತಿ ಪಡೆದು ದೇಶಸೇವೆ ಮಾಡುವಂತಾಗಲಿ ಎನ್ನುವ ಆಶಯ ಹಲವರದ್ದು. ತಾನೂ ದೇಶ ಸೇವೆ ಮಾಡಿದ್ದಲ್ಲದೇ ತನ್ನ ಹುಟ್ಟೂರಿನ ಸಹೋದರ – ಸಹೋದರಿಯರೂ ದೇಶಸೇವೆ ಮಾಡಲು ಪ್ರೇರೇಪಿಸುತ್ತಿರುವ ಮತ್ತು ಉಚಿತ ತರಬೇತಿ ಮೂಲಕ ಪ್ರೋತ್ಸಾಹಿಸುತ್ತಿರುವ ನಿಸ್ವಾರ್ಥ ಸೇವಕನ ಕುರಿತು ನಮ್ಮೆಲ್ಲರ ಮೆಚ್ಚುಗೆ ಇರಲಿ ,
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ