ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ: ತಪ್ಪಿಸಿಕೊಂಡ ಮತ್ತೊಬ್ಬನಿಗಾಗಿ ಹುಡುಕಾಟ

ಹೊನ್ನಾವರ : ಪಟ್ಟಣದ ಬಂದರ ಸಮೀಪದ ಗ್ಯಾಸ್ ಗೋಡಾನ್ ಒಂದರ ಪಕ್ಕದಲ್ಲಿ ರಾತ್ರಿ 8-30 ಸುಮಾರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಹೊನ್ನಾವರ ಪಿ ಎಸ್ ಐ ಶಶಿಕುಮಾರ ಅವರ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೋರ್ವ ಪರಾರಿಯಾಗಿದ್ದು ಹುಡುಕಾಟ ಮುಂದುವರಿದಿದೆ, ಬಂದಿತ ಆರೋಪಿ ಗುರುರಾಜ ನಾಗರಾಜ ಹರಿಜನ ಎಂದು ತಿಳಿದುಬಂದಿದೆ. ಪ್ರಶಾಂತ ಮುರಳಿಧರ ಅಂಬಿಗ ಪರಾರಿಯಾಗಿದ್ದು, ಹುಡುಕಾಟ ಮುಂದುವರಿಸಿದ್ದಾರೆ, ಬಂಧಿತ ಆರೋಪಿಗಳಿಂದ ಒಟ್ಟು 10 ಪ್ಯಾಕೇಟ್ ಗಾಂಜಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version