ಕದ್ದ ಅಡಿಕೆ ಸಾಗಿಸುತ್ತಿದ್ದ ವೇಳೆ ಪೊಲೀಸರ ದಾಳಿ: ಓರ್ವನ ಬಂಧನ, ಇಬ್ಬರು ಪರಾರಿ

ಶಿರಸಿ: ಸುಮಾರು 2 ಕ್ವಿಂಟಲ್ ಹಸಿ ಅಡಿಕೆಯನ್ನು ಕದ್ದು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಹೆಬ್ಬತ್ತಿಯಲ್ಲಿ ನಡೆದಿದೆ. ಸೊರಬದ ಶಕುನಳ್ಳಿಯ ಅರ್ಜುನ್ ಎಲ್ಲಪ್ಪ ಮಾಸ್ತರ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಈತನಿಗೆ ಸಹಕರಿಸಿದ ಆರೋಪಿಗಳಾದ ಹೆಬ್ಬತ್ತಿಯ ಆಸ್ಲಾಂ ಅಬ್ದುಲ್ ಸಾಬ್ ಮತ್ತು ಶಶಿ ಮಾದರ್ ಪರಾರಿಯಾಗಿದ್ದಾರೆ.

ತಪ್ಪಿಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಆರೋಪಿಗಳು ಡಿಸೆಂಬರ್ 17 ರಂದು ಬೆಳಿಗ್ಗೆ ಹೆಬ್ಬತ್ತಿಯಲ್ಲಿ 3 ಅಡಿಕೆ ತೋಟದಲ್ಲಿ ಅಂದಾಜು 12 ಸಾವಿರ ರೂಪಾಯಿ ಬೆಲೆ ಬಾಳುವ ಅಡಿಕೆ ಕಳುವು ಮಾಡಿದ್ದರು. ಕದ್ದ ಅಡಿಕೆಯನ್ನು ಬೈಕ್ ಮೂಲಕ ಸಾಗಿಸಲು ಒಯ್ಯುತ್ತಿದ್ದಾಗ ಪೊಲೀಸರು ದಾಳಿಮಾಡಿದ್ದಾರೆ. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನವಾದ ಸುಮಾರು ಎರಡು ಕ್ವಿಂಟಲ್ ಅಡಿಕೆಯನ್ನು ಮತ್ತು ಮೋಟರ್ ಸೈಕಲ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version