ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ ನಾಯಿ: ಮಗುವಿನ ತುಟಿ, ಕಣ್ಣಿನ ಭಾಗಕ್ಕೆ ತೀವ್ರ ಗಾಯ

ಭಟ್ಕಳ: ಮನೆ ಒಳಗಡೆ ಆಟವಾಡುತ್ತಿದ್ದ ವೇಳೆ ಎರಡುವರೆ ವರ್ಷದ ಮಗುವಿಗೆ ಬೀದಿ ನಾಯಿಯೊಂದು ಮನೆಯ ಒಳಗೆ ನುಗ್ಗಿ ಮಗುವಿನ ಮೇಲೆ ಭೀಕರ ದಾಳಿ ನಡೆಸಿ ಕಚ್ಚಿದ ಘಟನೆ ಮಂಗಳವಾರದಂದು ಮುರುಡೇಶ್ವರ ಮಾವಳ್ಳಿ-1ರ ಸೋನಾರಕೇರಿಯಲ್ಲಿ ನಡೆದಿದೆ.  ನಾಯಿಯಿಂದ ದಾಳಿಗೊಳಗಗಿ ಗಾಯಗೊಂಡ ಮಗು ದ್ರವ್ಯಾ ಸಂತೋಷ ನಾಯ್ಕ ಮುರುಡೇಶ್ವರ ಮಾವಳ್ಳಿ-1 ಸೋನಾರಕೇರಿ ನಿವಾಸಿ ಎಂದು ತಿಳಿದು ಬಂದಿದೆ. 

ಈಕೆ ಮಕ್ಕಳೊಂದಿಗೆ ತನ್ನ ಮನೆಯೊಳಗೆ ಆಟವಾಡುತ್ತಿದ್ದ ವೇಳೆ ಹೊರಗಿನಿಂದ ಬಂದ ಬೀದಿ ನಾಯಿಯೊಂದು ಏಕಾಏಕಿ ಮನೆಯೊಳಗೆ ನುಗ್ಗಿ ಮಗು ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಎರಡೂವರೆ ವರ್ಷದ ಮಗುವಿನ ಮುಖದ ಭಾಗಕ್ಕೆ ಕಚ್ಚಿದ್ದು ಮಗುವಿನ ತುಟಿ ಹಾಗೂ ಕಣ್ಣಿನ ಕೆಳ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿದ್ದು, ದಾಳಿಯಿಂದ ಮಗುವಿನ ಪಾಲಕರು ತಪ್ಪಿಸಿ ತಕ್ಷಣ ಮಗುವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ.

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version