ಬೀಚ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ವರ್ಷಾಚರಣೆಗೆ ನಿರ್ಬಂಧ: ಸಾರ್ವಜನಿಕವಾಗಿ ಸಂಭ್ರಮಾಚರಣೆ ನಡೆಸಿದರೆ ಕಠಿಣ ಕ್ರಮ

ಗೋಕರ್ಣ: ಬೀಚ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿದ್ದು, ರೆಸಾರ್ಟ್, ವಸತಿ ಗೃಹ ಮುಂತಾದ ಖಾಸಗಿ ಸ್ಥಳದಲ್ಲಿ ವರ್ಷಾಚರಣೆ ನಡೆಸಬಹುದು. ಆದರೆ, ಯಾವುದೇ ಪಾರ್ಟಿ, ಮ್ಯೂಸಿಕ್, ಡಾನ್ಸ್ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ ಎಂದು ಗೋಕರ್ಣ ಪೊಲೀಸ್ ನಿರೀಕ್ಷಕ ವಸಂತ ಆಚಾರ್ ಸ್ಪಷ್ಟಪಡಿಸಿದ್ದಾರೆ.

ರೆಸಾರ್ಟ್, ವಸತಿ ಗೃಹ, ಹೋಟೆಲ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿ, ಡಿ.ಜೆ. ಬಳಸುವಂತಿಲ್ಲ. ಸಿಡಿಮದ್ದು, ಸಾರ್ವಜನಿಕ ಸ್ಥಳದಲ್ಲಿ ಕುಣಿಯುವುದನ್ನು ನಿಷೇಧಿಸಲಾಗಿದೆ. ರೆಸಾರ್ಟ್, ವಸತಿ ಗೃಹ, ಹೋಟೆಲ್‌ಗಳಲ್ಲಿ ಪೊಲೀಸರ ಸೂಚನೆ ಮೀರಿ ಸಂಭ್ರಮಾಚರಣೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಖಾಸಗಿ ಸ್ಥಳದಲ್ಲಿಯೂ ಅನೈತಿಕ ಚಟುವಟಿಕೆ, ಗದ್ದಲ, ಗಲಾಟೆ, ಕುಡಿದು ಕುಣಿಯುವುದಕ್ಕೆ ಆಸ್ಪದ ನೀಡಬಾರದು ಎಂದು ಹೇಳಿದರು. ಪಿಎಸ್‌ಐ.ನವೀನ್ ನಾಯ್ಕ ಮಾತನಾಡಿದರು. ಪಿಎಸ್‌ಐ ಸುಧಾ ಅಘನಾಶಿನಿ, ಓಂಬೀಚ್, ಕುಡ್ಲೆ ಬೀಚ್, ಮೇನ್ ಬೀಚ್‌ಗಳ ರೆಸಾರ್ಟ್, ವಸತಿಗೃಹ, ಹೋಟೆಲ್ ಗಳ ಮಾಲೀಕರು ಸಭೆಯಲ್ಲಿದ್ದರು.

ವಿಸ್ಮಯ ನ್ಯೂಸ್, ಗೋಕರ್ಣ

Exit mobile version