ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಸಮೀಪ ಎರಡು ಕೆ.ಜಿಗೂ ಹೆಚ್ಚು ಗಾಂಜಾ ವಶ: ಆರೋಪಿ ಬಂಧನ

ಗೋಕರ್ಣ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಗೋಕರ್ಣ  ಪೊಲೀಸರು ಬಂಧಿಸಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಮಾದಕ ವಸ್ತುವನ್ನು ವಶಪಡಿಸಿಕೊಂಡ ಘಟನೆ ಸಾಣೆಕಟ್ಟಾ ಬಳಿ ನಡೆದಿದೆ.ಹಳೆ ಹುಬ್ಬಳ್ಳಿ ಪ್ರಶಾಂತ ನಗರ ನಿವಾಸಿ ನಾಗರಾಜ ಮೋತಿಲಾಲ್ ಬದ್ದಿ (49) ಬಂಧಿತ ಆರೋಪಿಯಾಗಿದ್ದು ಈತನಿಂದ 2 ಕೆ.ಜಿ 46 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್,ಭಟ್ಕಳ ವಿಭಾಗದ ಡಿ.ವೈ.ಎಸ್. ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಕರ್ಣ ಪೊಲೀಸ್ ನಿರೀಕ್ಷಕ ವಸಂತ ಆಚಾರ್, ಉಪ ನಿರೀಕ್ಷಕ ನವೀನ ನಾಯ್ಕ, ಸುಧಾ ಅಘನಾಶಿನಿ, ಸಿಬ್ಬಂದಿಗಳಾದ ರಾಜೇಶ ನಾಯ್ಕ, ಸಚಿನ ನಾಯ್ಕ, ಕಿರಣ ಬಾಳೂರ್, ಶಿವಾನಂದ ಗೌಡ, ನಾಗರಾಜ ಪಟಗಾರ, ಜಿ.ಬಿ.ರಾಣಿ, ಜಟ್ಟಪ್ಪ ನಾಯ್ಕ, ಸುಬ್ರಹ್ಮಣ್ಯ ಹರಿಕಂತ್ರ ಮೊದಲಾದವರು ಪಾಲ್ಗೊಂಡಿದ್ದರು.   

ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸಂಭ್ರಮ ಮತ್ತಿತರ ಕಾರಣಗಳಿಂದ ಗೋಕರ್ಣ ಕ್ಕೆ ಹೆಚ್ಚಿನ ಪ್ರವಾಸಿಗರು ಬಂದು ಹೋಗುವುದರಿಂದ,ಈ ವೇಳೆ ಗಾಂಜಾ  ಮತ್ತಿತರ ಮಾದಕ ಪದಾರ್ಥಗಳ ವ್ಯಾಪಾರ-ವಹಿವಾಟು ಜೋರಾಗಿ ನಡೆಯುತ್ತಿತ್ತು ಎನ್ನಲಾಗಿದೆ.ಎಸ್ಪಿ ಡಾ. ಸುಮನ ಪನ್ನೇಕರ್  ಖಡಕ್ ಸೂಚನೆ ಮೇರೆಗೆ, ಬೀಚ್ ಮತ್ತಿತರ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟು,ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ,

Exit mobile version